ಶಿರಸಿಯ ಮಾಜಿ ಎಸಿ  ಕಾವ್ಯಾರಾಣಿ ‘ಕೈ’ಗೆ ಕೋಳ ತೊಡಿಸಿದ ಲೋಕಾಯುಕ್ತ!?? ಕೇಸ್ ಕ್ಲಿಯರ್ ಮಾಡೋಕೆ ಹುಣಸೂರಿನಲ್ಲಿ ನೋಟು ಕೇಳಿದ ಎಸಿ??

ಹಂಚಿಕೊಳ್ಳಿ

ಹುಣಸೂರು: ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುತ್ತಿದ್ದ ವೇಳೆ ಶಿರಸಿ ಉಪವಿಭಾಗದ ಮಾಜಿ ಉಪವಿಭಾಗಾಧಿಕಾರಿ (AC) ಹಾಗೂ ಪ್ರಸ್ತುತ ಹುಣಸೂರು ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಕಾವ್ಯಾರಾಣಿ ಮತ್ತು ಅವರ ಆಪ್ತ ಸಹಾಯಕ (PA) ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.?

ದಾಳಿಯ ಹಿನ್ನೆಲೆ:
ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ಖಚಿತ ದೂರಿನ ಆಧಾರದ ಮೇಲೆ ಈ ದಾಳಿ ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಸರ್ವೆ ನಂ. 17/26 ಕ್ಕೆ ಸೇರಿದ 4 ಎಕರೆ 20 ಗುಂಟೆ ಭೂಮಿಯ ವಿವಾದಾತ್ಮಕ ಪ್ರಕರಣವೊಂದು ಕಳೆದ ಒಂದು ವರ್ಷದಿಂದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿತ್ತು.

ಲೋಕಾಯುಕ್ತ ಕಾರ್ಯಾಚರಣೆ:

  • ಆರೋಪ: ಈ ಭೂ ವಿವಾದದ ತೀರ್ಪನ್ನು ದೂರುದಾರರ ಪರವಾಗಿ ನೀಡಲು ಕಾವ್ಯಾರಾಣಿ ಹಾಗೂ ಅವರ ಆಪ್ತ ಸಹಾಯಕ ಲಂಚದ ಬೇಡಿಕೆ ಇಟ್ಟಿದ್ದರು.
  • ಲೋಕಾಯುಕ್ತ ಜಾಲ: ಲಂಚದ ಹಣದೊಂದಿಗೆ ಸೋಮವಾರ ದೂರುದಾರರು ಕಚೇರಿಗೆ ತಲುಪಿದಾಗ, ಲೋಕಾಯುಕ್ತ ಪೊಲೀಸರು ಹೊಂಚು ಹಾಕಿ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *