ಸಂಸತ್ ಭವನದಲ್ಲಿ ಸೈಲೆಂಟ್ ಮೀಟಿಂಗ್: ಪ್ರಧಾನಿ ಎದುರು ಉತ್ತರ ಕನ್ನಡದ ಅಭಿವೃದ್ಧಿ ಮ್ಯಾಪ್ ಬಿಚ್ಚಿಟ್ಟ ಕಾಗೇರಿ!”

ಹಂಚಿಕೊಳ್ಳಿ

ನವದೆಹಲಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನವದೆಹಲಿಯ ಸಂಸತ್ ಭವನದಲ್ಲಿ ಸೋಮವಾರ ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಭೇಟಿಯ ವೇಳೆ ಸಂಸದರು ತಮ್ಮ  ಕ್ಷೇತ್ರದ  ಅಭಿವೃದ್ಧಿ ಹಾಗೂ ಪ್ರಸ್ತುತ ನಡೆಯುತ್ತಿರುವ ವಿವಿಧ ಪ್ರಗತಿ ಪರಿಶೀಲನಾ ಯೋಜನೆಗಳ ಕುರಿತು ಪ್ರಧಾನಿಯವರಿಗೆ ಮಾಹಿತಿ ತಿಳಿಸಿದರು. ಕ್ಷೇತ್ರದ ಭೌಗೋಳಿಕ ಅಗತ್ಯತೆಗಳು ಮತ್ತು ಜನರ ಅತ್ಯಗತ್ಯ ಬೇಡಿಕೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಿದರು.

ಉತ್ತರ ಕನ್ನಡ ಕ್ಷೇತ್ರದ ಹಲವು ವಿಶಿಷ್ಟತೆಗಳಿಂದ ಕೂಡಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕ್ಷೇತ್ರದ ಸಮಗ್ರ ವಿಕಾಸಕ್ಕೆ ಸಂಬಂಧಿಸಿದಂತೆ ತಮ್ಮ ದೂರದೃಷ್ಟಿಯ ಆಲೋಚನೆಗಳನ್ನು ಸಮಗ್ರವಾಗಿ ಹಂಚಿಕೊಂಡರು. ಅಲ್ಲದೆ, ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಅಭಿವೃದ್ದಿಪಡಿಸಲು ಸಾಧ್ಯವಿದೆ ಎಂಬುದನ್ನು  ಸಂಸದರಿಗೆ  ಮಾರ್ಗದರ್ಶನ ನೀಡಿದರು.

Leave a Reply

Your email address will not be published. Required fields are marked *