ಯಲ್ಲಾಪುರ: ಇಲ್ಲಿನ ತಳಕೇಬೈಲ್‌ನಿಂದ ಕಳಚೆಗೆ ತೆರಳುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಜುಲೈ 23ರ ರಾತ್ರಿ ಸುಮಾರಿಗೆ ಭಾರೀ ಗುಡ್ಡ ಕುಸಿತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಉನ್ನತಾಧಿಕಾರಿಗಳು ಜಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಡ್ಡ ಕುಸಿದ ಬಗ್ಗೆ “ಹಳ್ಳಿನ್ಯೂಸ್” ಬೆಳಿಗ್ಗೆ ವರದಿ ಪ್ರಕಟಿಸಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಲೋಕೋಪಯೋಗಿ ಇಲಾಖೆಯ (PWD) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ (AEE) ರಾಮಲಿಂಗೇಶ್ವರ್ ಎಸ್.ಎಮ್, ಕಿರಿಯ ಅಭಿಯಂತರರಾದ (JE) ರವಿ ಭೋವಿ, ಯಲ್ಲಾಪುರದ ಕಂದಾಯ ನಿರೀಕ್ಷಕರಾದ ಕಾಜಪ್ಪ ಅರಕೇರಿ, ಗ್ರಾಮ ಆಡಳಿತಾಧಿಕಾರಿ ಯಲ್ಲಮ್ಮ ಪಾಟೀಲ್ ಹಾಗೂ ವಜ್ರಳ್ಳಿ ಗ್ರಾಮ ಪಂಚಾಯತ್ ನೋಡಲ್ ಅಧಿಕಾರಿಗಳು, ಬೀಟ್ ಪೊಲೀಸ್ ಸಿಬ್ಬಂದಿ ಮಹೇಶ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು , ರಸ್ತೆಗೆ ಬಿದ್ದಿದ್ದ ಮಣ್ಣನ್ನು ತಾತ್ಕಾಲಿಕವಾಗಿ ಸ್ಥಳಿಯ ಜನರು ಸಲ್ಪ ಪಕ್ಕಕ್ಕೆ ಸರಿಸಿ ಚಿಕ್ಕ ವಾಹನ ಹೋಗುವಂತೆ ಮಾಡಿದ್ದರು. ಪ್ರಸ್ತುತ ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರಸ್ತೆಯ ಬದಿಯಲ್ಲಿ ಇನ್ನುಳಿದಿರುವ ಮಣ್ಣು ಮತ್ತು ಅವಶೇಷಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ಸಂಪೂರ್ಣವಾಗಿ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.













Leave a Reply