ಯಲ್ಲಾಪುರ:
ಪಂಚೇಂದ್ರಿಯಗಳಲ್ಲಿ ಕಣ್ಣು ಬಹುಮುಖ್ಯವಾದ ಅಂಗ. ಜನರು ತಮ್ಮ ಆರೋಗ್ಯದ ಬಗೆಗೆ ಕಾಳಜಿವಹಿಸಬೇಕು. ಎಂದು ಕೈಗಾ ಅಣುಸ್ಥಾವರದ
ಸಿಎಸ್ ಆರ್ ಸಮಿತಿಯ ಅಧ್ಯಕ್ಷ ಎಸ್ ಜೆ ಟಿ ಸ್ವಾಮಿ ಅಭಿಪ್ರಾಯಪಟ್ಟರು.
ಯಲ್ಲಾಪುರದ ಜ್ಞಾನ ತರಂಗಿಣಿ ಫೌಂಡೇಶನ್ , ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಮಿತಿ, ಹುಬ್ಬಳ್ಳಿಯ ಡಾ.ಅಗರ್ವಾಲ ಐ ಹಾಸ್ಪಿಟಲ್ ಇವರ ಸಂಯುಕ್ತಾಶ್ರಯದಲ್ಲಿ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಯಲ್ಲಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್ ಡಿ ಜನಾರ್ಧನ ಉಪಸ್ಥಿತರಿದ್ದು ಮಾತನಾಡಿ
ಸಮಾಜಕ್ಕೆ ಉಪಯೋಗ ಆಗುವ ಸೇವೆ ನಮ್ಮದಾಗಬೇಕು.
ಇಂದು ಭಾವನಾತ್ಮಕ ಜ್ಞಾನ ನೀಡುವ ಶಿಕ್ಷಣದ ಅಗತ್ಯವಿದೆ.
ಪ್ರಕೃತಿಯನ್ನು ಪ್ರಶ್ನೆ ಮಾಡುವವರು ವಿಜ್ಞಾನಿಗಳಾಗಿದ್ದಾರೆ. ಜೀವನದ ಪ್ರಯೋಗಶೀಲತೆ ನಿರಂತರವಾಗಿರುತ್ತದೆ. ಕಾರ್ಯದರ್ಶಿ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ, ನಾಗೇಂದ್ರ ಭಟ್ಟ ನಡಿಗೆಮನೆ , ಡಾ ಗಣೇಶ , ವಿನೋದ್ ಕುಮಾರ್ ಗಾವಕಾರ,ಮುಖ್ಯಾಧ್ಯಾಪಕ ಎಂ ಕೆ ಭಟ್ಟ, ಹುಬ್ಬಳ್ಳಿಯ ಅಗರ್ವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು .
ಸಭೆಯ ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಿ ಶಂಕರ ಭಟ್ಟ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಸಾಮಾಜಿಕವಾದ ಕಳಕಳಿಯ ಅಂತರಂಗದ ಸೌಂದರ್ಯವು ವಿದ್ಯಾರ್ಥಿಗಳ ಅಧ್ಯಯನದಲ್ಲಿದೆ. ಎಂದರು. ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.
ಭೂಮಿಕಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ
ಶಿಕ್ಷಕ ಎಸ್ ಟಿ ಬೇವಿನಕಟ್ಟಿ ನಿರೂಪಿಸಿದರು.
ಯಲ್ಲಾಪುರದ ಜ್ಞಾನ ತರಂಗಿಣಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಪ್ಪು ವರಕ ಕೊನೆಯಲ್ಲಿ ವಂದಿಸಿದರು.













Leave a Reply