“ಇನ್ಮೇಲೆ ಕೆಲಸಗಾರರನ್ನ ಹುಡುಕೋಕೆ ಗಲ್ಲಿ ಗಲ್ಲಿ ಅಲೆಯಬೇಕಾಗಿಲ್ಲ; ‘Unitefix’ ಆಪ್ ಡೌನ್‌ಲೋಡ್ ಮಾಡಿದ್ರೆ ಸಾಕು!”

ಹಂಚಿಕೊಳ್ಳಿ

ಉತ್ತರಕನ್ನಡ: ಆಧುನಿಕ ಜಗತ್ತಿನಲ್ಲಿ ಎಲ್ಲದಕ್ಕೂ ಆಪ್‌ಗಳಿವೆ. ಆದರೆ ಉತ್ತರ ಕನ್ನಡ ಭಾಗದ ಜನರಿಗೆ ತುರ್ತಾಗಿ ಒಬ್ಬ ಪ್ಲಂಬರ್, ಎಲೆಕ್ಟ್ರಿಷಿಯನ್ ಅಥವಾ ಕಂಪ್ಯೂಟರ್ ಮೆಕ್ಯಾನಿಕ್ ಬೇಕೆಂದರೆ ಇಂದಿಗೂ ಪರದಾಡಬೇಕಾದ ಸ್ಥಿತಿ ಇದೆ. ಇತ್ತ ಕೌಶಲ್ಯವಿದ್ದರೂ ಸೂಕ್ತ ಕೆಲಸ ಸಿಗದೆ ಸ್ಥಳೀಯ ಯುವಕರು ಮುಂಬೈ, ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಜಿಲ್ಲೆಯ ಈ ಜ್ವಲಂತ ಸಮಸ್ಯೆಗೆ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸ್ವದೇಶಿ ಸಂಸ್ಥೆಯಾದ ‘Unitefix Services Pvt Ltd’ ವಿಶಿಷ್ಟ ಡಿಜಿಟಲ್ ಪರಿಹಾರ ಕಂಡುಕೊಂಡಿದೆ. ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸ್ಥಳೀಯ ಕೌಶಲ್ಯಯುತ ಕೆಲಸಗಾರರನ್ನು ಮತ್ತು ಗ್ರಾಹಕರನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ವಿನೂತನ ಮೊಬೈಲ್ ಆಪ್ ಅನ್ನು ಸಂಸ್ಥೆ ಪರಿಚಯಿಸಿದೆ. ಇದು ಕೇವಲ ಒಂದು ಅಪ್ಲಿಕೇಶನ್ ಆಗಿರದೆ, ಜಿಲ್ಲೆಯ ನಿರುದ್ಯೋಗ ನಿವಾರಣೆ ಹಾಗೂ ಸಾರ್ವಜನಿಕರ ದೈನಂದಿನ ಬದುಕನ್ನು ಸುಲಭಗೊಳಿಸುವ ಪಾರದರ್ಶಕ ಡಿಜಿಟಲ್ ಕ್ರಾಂತಿಯಾಗಿದೆ.

ಸಾಮಾನ್ಯವಾಗಿ ಮನೆ ರಿಪೇರಿ ಅಥವಾ ತಾಂತ್ರಿಕ ಕೆಲಸಗಳಿಗಾಗಿ ಗ್ರಾಹಕರು ಮಧ್ಯವರ್ತಿಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ಹಣದ ನಷ್ಟವಾದರೆ, ಇತ್ತ ಕಷ್ಟಪಟ್ಟು ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ಕೂಲಿ ಸಿಗುವುದಿಲ್ಲ. ‘Unitefix’ ಆಪ್ ಎಲ್ಲದಕ್ಕೂ ಮುಕ್ತಿ ಕೊಟ್ಟಿದೆ. ಕಂಪ್ಯೂಟರ್, ಸಿಸಿಟಿವಿ ತಂತ್ರಜ್ಞರು, ಎಲೆಕ್ಟ್ರಿಷಿಯನ್, ಪ್ಲಂಬರ್, ಬಡಗಿ (ಕಾರ್ಪೆಂಟರ್), ಪೇಂಟರ್ ಮತ್ತು ಗೃಹೋಪಯೋಗಿ ವಸ್ತುಗಳ ರಿಪೇರಿ ಮಾಡುವ ನುರಿತ ವೃತ್ತಿಪರರು ನೇರವಾಗಿ ಗ್ರಾಹಕರನ್ನು ತಲುಪಲು ಇದು ಸುವರ್ಣಾವಕಾಶ ನೀಡಿದೆ. ಇದರಿಂದ ಸಂಪೂರ್ಣ ಪಾರದರ್ಶಕತೆ ಮತ್ತು ನಂಬಿಕಸ್ಥ ಸೇವೆ ಲಭ್ಯವಾಗಲಿದೆ.

ಸದ್ಯಕ್ಕೆ ಉಚಿತ ನೋಂದಣಿ: ಯಲ್ಲಾಪುರ, ಹೊನ್ನಾವರದಲ್ಲಿ ಪ್ರಾಯೋಗಿಕ ಚಾಲನೆ
ಸ್ಥಳೀಯ ಸಂಸ್ಥೆಯಾಗಿರುವ ‘Unitefix’, ಜಿಲ್ಲೆಯ ಎಲ್ಲಾ ಭಾಗದ ಕೆಲಸಗಾರರಿಗೂ ಸದ್ಯಕ್ಕೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ (Free Registration) ಸೇರಿಕೊಳ್ಳಲು ಅವಕಾಶ ನೀಡಿದೆ. ಗೂಗಲ್ ಪ್ಲೇಸ್ಟೋರ್ ಮೂಲಕ ವೃತ್ತಿಪರರು ಮತ್ತು ಸಾರ್ವಜನಿಕರು ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸದ್ಯಕ್ಕೆ ಪ್ರಾಯೋಗಿಕವಾಗಿ (Pilot Project) ಯಲ್ಲಾಪುರ ಮತ್ತು ಹೊನ್ನಾವರ ತಾಲ್ಲೂಕುಗಳಲ್ಲಿ ಈ ಸೇವೆ ಆರಂಭವಾಗಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಈ ಸೇವೆಯನ್ನು ವಿಸ್ತರಿಸಲು ಸಂಸ್ಥೆ ಸಜ್ಜಾಗಿದೆ.
ಉದ್ಯೋಗದ ಜೊತೆಗೆ ವ್ಯಾಪಾರಕ್ಕೂ ಅವಕಾಶ
ಈ ಆಪ್ ಕೇವಲ ಸೇವೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮುಂಬರುವ ದಿನಗಳಲ್ಲಿ ಇದೇ ಆ್ಯಪ್‌ನಲ್ಲಿ ಸರಕು ಮತ್ತು ವಸ್ತುಗಳನ್ನು ನೇರವಾಗಿ ಮಾರಾಟ ಮಾಡಲು ಹಾಗೂ ಖರೀದಿ ಮಾಡಲು ಸಹ ಅತ್ಯಾಧುನಿಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಇದರಿಂದ ಜಿಲ್ಲೆಯ ಸಣ್ಣ ವ್ಯಾಪಾರಿಗಳಿಗೂ ದೊಡ್ಡ ಡಿಜಿಟಲ್ ಮಾರುಕಟ್ಟೆ ಸಿಗಲಿದೆ.
ಹೂಡಿಕೆದಾರರಿಗೆ ಮುಕ್ತ ಆಹ್ವಾನ
ಉತ್ತರ ಕನ್ನಡ ಜಿಲ್ಲೆಯ ಈ ಮೊದಲ ಹೆಮ್ಮೆಯ ದೇಶಿ ಡಿಜಿಟಲ್ ಸಂಸ್ಥೆಯ ಬೆಳವಣಿಗೆಗೆ ಜಿಲ್ಲೆಯ ಸಮಸ್ತ ಜನತೆ, ಉದ್ಯಮಿಗಳು ಹಾಗೂ ಕಾರ್ಮಿಕ ಬಂಧುಗಳ ಸಹಕಾರ ಅಗತ್ಯವಾಗಿದೆ. ಸ್ಥಳೀಯ ಉದ್ಯೋಗಶೀಲತೆಗೆ ಬೆಂಬಲ ನೀಡಲು ಪ್ರತಿಯೊಬ್ಬರೂ ಈ ಆಪ್ ಬಳಸಬೇಕಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಉದ್ಯಮದಲ್ಲಿ ಪಾಲುದಾರರಾಗಲು ಅಥವಾ ಹೂಡಿಕೆ (Investment) ಮಾಡಲು ಆಸಕ್ತಿ ಇರುವ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಸಂಸ್ಥೆ ಮುಕ್ತ ಆಹ್ವಾನ ನೀಡಿದೆ.


*ನೀವು ಈಗಲೇ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿ ಅಥವಾ ಈ ಲಿಂಕ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಿ*
https://play.google.com/store/apps/details?id=com.unitefix.app

Leave a Reply

Your email address will not be published. Required fields are marked *