ಬಾಲ್ಯದ ಆಟದ  ಬದಲು,  ಆಸ್ಪತ್ರೆಯ ಹಾಸಿಗೆಯಲ್ಲಿ ಬದುಕಿಗಾಗಿ ಹೋರಾಡುತ್ತಿರುವ 11 ವರ್ಷದ ರಕ್ಷಿತ್‌ಗೆ ಬೇಕಿದೆ ನಿಮ್ಮ ನೆರವು!

ಹಂಚಿಕೊಳ್ಳಿ

ಥಲಸ್ಸೆಮಿಯಾ ಮೇಜರ್‌ನಿಂದ ಬಳಲುತ್ತಿರುವ ರಕ್ಷಿತ್‌ಗೆ ಅಸ್ಥಿಮಜ್ಜೆ ಕಸಿ ಅನಿವಾರ್ಯ; ಕುಟುಂಬದಿಂದ ಕರುಣೆಯ ಮನವಿ

ಯಲ್ಲಾಪುರ : ತಾಲೂಕಿನ ಬಾಸಲ್ ಗ್ರಾಮದ ರಕ್ಷಿತ್ ಮರಾಠಿ ಬಾಲ್ಯವನ್ನು ಸರಿಯಾಗಿ ಅನುಭವಿಸಬೇಕಾದ 11 ವರ್ಷದ ಪುಟ್ಟ ಬಾಲಕ. ಅವನ ಬದುಕು ಇಂದು ಗಂಭೀರ ಕಾಯಿಲೆಯೊಂದಿಗೆ ಹೋರಾಟ ನಡೆಸುತ್ತಿದೆ. ಥಲಸ್ಸೆಮಿಯಾ ಮೇಜರ್ (Thalassemia Major) ಎಂಬ ಅನುವಂಶೀಯ ರಕ್ತ ಕಾಯಿಲೆಯಿಂದ ಬಳಲುತ್ತಿರುವ ರಕ್ಷಿತ್ ಕೃಷ್ಣ ಮರಾಠಿ ಅವರ ಜೀವ ಉಳಿಸಲು ಇದೀಗ Bone Marrow Transplant (BMT) ಚಿಕಿತ್ಸೆಯ ಅಗತ್ಯವಿದ್ದು, ಇದಕ್ಕಾಗಿ ಸುಮಾರು ₹45 ಲಕ್ಷ ಹಣದ ಅವಶ್ಯಕತೆ ಎದುರಾಗಿದೆ.

ರಕ್ಷಿತ್ ಅವರು ಯಲ್ಲಾಪುರ ತಾಲೂಕಿನ ಮಾವಿನಮನೆ ಪಂಚಾಯತನ ಬಾಸಲ್ ಗ್ರಾಮದ  ಕೃಷ್ಣ ಟಿ. ಮರಾಠಿ ಅವರ ಪುತ್ರ. ಕೇವಲ 11 ವರ್ಷದ ಈ ಬಾಲಕನಿಗೆ ಬಾಲ್ಯದಿಂದಲೇ ಕಾಯಿಲೆಯ ನೋವು ತಪ್ಪಿಲ್ಲ. ಪ್ರತಿ ತಿಂಗಳು 3ರಿಂದ 4 ಬಾರಿ ರಕ್ತ ವರ್ಗಾವಣೆ (Blood Transfusion) ಮಾಡಿಸಿಕೊಳ್ಳುತ್ತಾ ಜೀವನ ಸಾಗಿಸುತ್ತಿರುವ ರಕ್ಷಿತ್‌ನ ಕುಟುಂಬ ಈಗ ಮತ್ತೊಂದು ದೊಡ್ಡ ಸವಾಲಿನ ಮುಂದೆ ನಿಂತಿದೆ.

ರಕ್ಷಿತ್‌ಗೆ Thalassemia Major (ಥಲಸ್ಸೆಮಿಯಾ ಮೇಜರ್) ಎಂಬ ರಕ್ತ ಸಂಬಂಧಿ ಅನುವಂಶೀಯ ಕಾಯಿಲೆ ಇರುವುದರಿಂದ, ಕಾಯಿಲೆಯಿಂದ ಹೊರಬರಲು Bone Marrow Transplant (BMT) ಒಂದೇ ಶಾಶ್ವತ ಪರಿಹಾರ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮುಂದಾಗಿದ್ದು, TCR Alpha/Beta and CD45RA Kit ಬಳಸಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.

ಆದರೆ ಈ ಚಿಕಿತ್ಸೆಗೆ ತಗಲುವ ವೆಚ್ಚವೇ ಕುಟುಂಬದ ಮುಂದೆ ದೊಡ್ಡ ಪರ್ವತದಂತೆ ನಿಂತಿದೆ. ಚಿಕಿತ್ಸೆಗೆ ಅಂದಾಜು ₹45,00,000 (ನಲವತ್ತೈದು ಲಕ್ಷ ರೂ.) ಅಗತ್ಯವಿದೆ. ಸಾಮಾನ್ಯ ಕುಟುಂಬವೊಂದಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಒಟ್ಟುಗೂಡಿಸುವುದು ಸುಲಭದ ಮಾತಲ್ಲ.

ರಕ್ಷಿತ್‌ನ ಹುಟ್ಟಿನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು 3ರಿಂದ 4 ಬಾರಿ ರಕ್ತ ವರ್ಗಾವಣೆ ಮಾಡಿಸಲಾಗುತ್ತಿದ್ದು, ಇದಕ್ಕಾಗಿ ಈಗಾಗಲೇ ಸುಮಾರು ₹15 ಲಕ್ಷ ಹಣ ಖರ್ಚಾಗಿದೆ ಎಂದು ಕುಟುಂಬ ತಿಳಿಸಿದೆ. ನಿರಂತರ ಚಿಕಿತ್ಸೆಯ ವೆಚ್ಚದ ನಡುವೆಯೇ ಇದೀಗ ಅಸ್ಥಿಮಜ್ಜೆ ಕಸಿ ಚಿಕಿತ್ಸೆಗೆ ಬೇಕಾಗಿರುವ ₹45 ಲಕ್ಷವನ್ನು ಹೊಂದಿಸುವುದು ಕುಟುಂಬಕ್ಕೆ ಕಠಿಣ ಸವಾಲಾಗಿದೆ.

ನಿಮ್ಮ ಪುಟ್ಟ ಸಹಾಯ ರಕ್ಷಿತ್‌ಗೆ ಹೊಸ ಬದುಕು ನೀಡಬಹುದು

ರಕ್ಷಿತ್‌ನ ಕಣ್ಣಲ್ಲಿ ಇನ್ನೂ ಬದುಕಿನ ಕನಸುಗಳಿವೆ. ಆದರೆ ಆ ಕನಸುಗಳಿಗೆ ಈಗ ಹಣದ ನೆರವಿನ ಅಗತ್ಯ ಎದುರಾಗಿದೆ. ಒಂದು ಮಗುವಿನ ಬದುಕನ್ನು ಉಳಿಸಲು ಬೇಕಾಗಿರುವ ಈ ದೊಡ್ಡ ಮೊತ್ತವನ್ನು ಒಬ್ಬ ಕುಟುಂಬದಿಂದ ಮಾತ್ರ ಭರಿಸುವುದು ಕಷ್ಟ. ಸಮಾಜದ ಪ್ರತಿಯೊಬ್ಬರ ಸಣ್ಣ-ಪುಟ್ಟ ನೆರವು ಒಟ್ಟಾಗಿ ಸೇರಿದರೆ ರಕ್ಷಿತ್‌ನ ಚಿಕಿತ್ಸೆಗೆ ದೊಡ್ಡ ಬಲವಾಗಬಹುದು.

“ರಕ್ಷಿತ್‌ನ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡಲು ತಮ್ಮ ಒಂದು ಪುಟ್ಟ ಸಹಾಯವನ್ನು ನೀಡಿಕೊಡಬೇಕು” ಎಂದು ಕುಟುಂಬ ಕಳಕಳಿಯ ಮನವಿ ಮಾಡಿದೆ.


ಸಹಾಯ ಮಾಡಬಯಸುವವರು ಬ್ಯಾಂಕ್ ಮೂಲಕ ನೆರವು ನೀಡಬಹುದು

Account Name: Krishna Marathi
A/c No.: 64192088977
IFSC: SBIN0040544
Bank: State Bank of India
Branch: Ashwini Circle Branch, Sirsi

PhonePe ಮೂಲಕ ನೆರವು:

9886604890
9448803955

ಸಂಪರ್ಕ ಸಂಖ್ಯೆ:

9886604890

ರಕ್ಷಿತ್‌ನ ಬದುಕಿಗಾಗಿ ನಿಮ್ಮ ಕೈಲಾದ ನೆರವು ನೀಡಿ. ನಿಮ್ಮ ಸಣ್ಣ ಸಹಾಯವೇ ಈ ಪುಟ್ಟ ಬಾಲಕನ ಬದುಕಿನಲ್ಲಿ ದೊಡ್ಡ ಆಶಾಕಿರಣವಾಗಬಹುದು.

Leave a Reply

Your email address will not be published. Required fields are marked *