ವಜ್ರಳ್ಳಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ..

ಹಂಚಿಕೊಳ್ಳಿ

ಯಲ್ಲಾಪುರ 26…

ಯಲ್ಲಾಪುರದ ಜ್ಞಾನ ತರಂಗಿಣಿ ಫೌಂಡೇಶನ್ , ವಜ್ರಳ್ಳಿಯ ಸರ್ವೋದಯ ಶಿಕ್ಷಣ ಸಮಿತಿ‌, ಹುಬ್ಬಳ್ಳಿಯ ಡಾ.ಅಗರ್ವಾಲ ಐ ಹಾಸ್ಪಿಟಲ್ ಇವರ ಸಂಯುಕ್ತಾಶ್ರಯದಲ್ಲಿ ಅಗಸ್ಟ್ 27ರಂದು ಗುರುವಾರ ಬೆಳಗ್ಗೆ 10ಗಂಟೆಗೆ‌ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಜರುಗಲಿದೆ.
ಕೈಗಾ ಅಣುಸ್ಥಾವರ ಸಿ ಎಸ್ ಆರ್ ಸಮಿತಿಯ ಅಧ್ಯಕ್ಷರಾದ ಎಸ್ ಜೆ ಟಿ ಸ್ವಾಮಿ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್ ಡಿ ಜನಾರ್ಧನ, ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ಸಂಸ್ಥೆಯ ಉಪಾಧ್ಯಕ್ಷ ಟಿ ಸಿ ಗಾಂವ್ಕರ್, ಕಾರ್ಯದರ್ಶಿ ಅಪ್ಪಣ್ಣ ಭಟ್ಟ ಬೆಣ್ಣೆಜಡ್ಡಿ, ಮುಖ್ಯಾಧ್ಯಾಪಕ ಎಂ ಕೆ ಭಟ್ಟ ಉಪಸ್ಥಿತರಿರುವರು. ಸಭೆಯ ಅಧ್ಯಕ್ಷತೆಯನ್ನು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಿ ಶಂಕರ ಭಟ್ಟ ವಹಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ಜ್ಞಾನ ತರಂಗಿಣಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಪ್ಪು ವರಕ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *