ಮಾರಿಗುಡಿಯಲ್ಲಿ ಭಕ್ತಿ ಭಾವದಿಂದ ಭಜನೆ

ಹಂಚಿಕೊಳ್ಳಿ

ಶಿರಸಿ: ನಗರದ ಮಾರಿಕಾಂಬಾ ದೇವಾಲಯದ ಸಭಾ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿವಿಧ ಭಜನೆ, ಭಕ್ತಿಗೀತೆ, ಭಾವಗೀತೆ ಹಾಗೂ ಯಕ್ಷಗಾನ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
ಬೆಳಿಗ್ಗೆ ಶ್ರೀ ಆರಾಧನಾ ಭಜನಾ ತಂಡ, ಶಿರಸಿ ಇವರಿಂದ ವಿವಿಧ ಭಜನೆಗಳು ಪ್ರಸ್ತುತಗೊಂಡವು. ಬಳಿಕ ಐಶ್ವರ್ಯ ಡಿ.ಆರ್.ಜಿ.ಎಸ್.ಕೆ. ಮೆಲೋಡೀಸ್ ತಂಡದವರು ಭಕ್ತಿಗೀತೆ ಹಾಗೂ ಭಾವಗೀತೆಗಳನ್ನು ಹಾಡಿದರು. ಸಂಜೆ ಈಡೂರಿನ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಶಿರಸಿಯ ಆರೋಹಿ ಭಜನಾ ಮಂಡಳಿ ತಂಡದವರು ವಿವಿಧ ಭಜನೆಗಳನ್ನು ಪ್ರಸ್ತುತಪಡಿಸಿದರು. ಯಕ್ಷಗೆಜ್ಜೆ ಗೋಳಿಕೊಪ್ಪ ತಂಡದ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ಗಮನಸೆಳೆಯಿತು.
ಧರ್ಮದರ್ಶಿ ಮಂಡಳಿ ಅಧ್ಯಕ್ಷ ರವಿ ಬೆಳ್ಳೇಮನೆ, ಉಪಾಧ್ಯಕ್ಷ ಅಶೋಕ ಎಸ್. ಪವಾರ, ಧರ್ಮದರ್ಶಿಗಳಾದ ಕೇಶವ ಜಿ. ಹೆಗಡೆ, ವಿನಾಯಕ ಎಸ್. ಶೇಟ್, ಅರ್ಚನಾ ಆರ್. ಹೊನ್ನಾವರ, ಬಾಬುದಾರರು, ಅರ್ಚಕರು, ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *