ಶಿರಸಿಯಲ್ಲಿ ಲೋಕಾಯುಕ್ತರ ದಾಳಿ: ಮುಂದಾಗಿದ್ದೇನು?

ಹಂಚಿಕೊಳ್ಳಿ

ಶಿರಸಿ: ನಗರದ ತಹಸೀಲ್ದಾರ್ ಕಚೇರಿಗೆ ಹಾವೇರಿ ಮತ್ತು ಉಡುಪಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಡಳಿತ ಸೌಧದಲ್ಲಿರುವ ವಿವಿಧ ಇಲಾಖೆಗಳ ಕಚೇರಿಗಳಿಗೆ ಹಾವೇರಿ ಲೋಕಾಯುಕ್ತ ಸಿಪಿಐ ವಿಶ್ವನಾಥ ಕಬ್ಬೂರು, ಉಡುಪಿ ಲೋಕಾಯುಕ್ತ ಸಿಪಿಐ ಮಂಜುನಾಥ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದು, ಕಚೇರಿಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದರು. ಸಿಬ್ಬಂದಿಯ ಕಾರ್ಯವೈಖರಿ ಹಾಗೂ ದಾಖಲೆಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *