ಅನಾರೋಗ್ಯದ ತೀವ್ರ ನೋವಿಗೆ ಮಣಿದ ವೃದ್ಧ: ಶಿರಸಿಯ ಮಂಜುಗುಣಿ ಕಾಡಿನಲ್ಲಿ ಆತ್ಮಹತ್ಯೆ

ಹಂಚಿಕೊಳ್ಳಿ

ಶಿರಸಿ: ತಾಲೂಕಿನ ಮಂಜುಗುಣಿ ಅರಣ್ಯ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮರದ ಟೊಂಗೆಗೆ  ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಅಂದಾಜು ಶನಿವಾರ ನಡೆದಿದೆ ಎನ್ನಲಾಗಿದೆ.
ಮಂಜುಗುಣಿ ಗ್ರಾಮದ ಹೊಸಪೇಟೆಯ ಸದಾಶಿವ ಗಿಡ್ಡ ಚಲುವಾದಿ (62) ಮೃತ ವ್ಯಕ್ತಿ.
ಕಳೆದ ಒಂದು ವಾರದಿಂದ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಮೆದುಳಿಗೆ ಸರಿಯಾಗಿ ರಕ್ತ ಸಂಚಲನವಾಗದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ಆ.14ರ ಮಧ್ಯಾಹ್ನ 12 ಗಂಟೆಯಿಂದ ಆ.15ರ ಮಧ್ಯಾಹ್ನ 1.37 ಗಂಟೆಯ ನಡುವಿನ ಅವಧಿಯಲ್ಲಿ ಮಂಜುಗುಣಿ ಅರಣ್ಯ ಪ್ರದೇಶದಲ್ಲಿ ಮರದ ಟೊಂಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪುತ್ರ ರಾಜೇಶ ಸದಾಶಿವ ಚಲುವಾದಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

*ಎಲ್ಲದಕ್ಕೂ ಆತ್ಮ ಹತ್ಯೆಯೆ ಪರಿಹಾರವಲ್ಲ. ಆತ್ಮಹತ್ಯೆ ಮಹಾಪಾಪ*

Leave a Reply

Your email address will not be published. Required fields are marked *