
ಯಲ್ಲಾಪುರ: ತಾಲೂಕಿನ ಕಳಚೆಯಲ್ಲಿ ‘ಸಹ್ಯಾದ್ರಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ’ ವತಿಯಿಂದ ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವವನ್ನು ಅತ್ಯಂತ ವಿಜೃಂಭಣೆ ಆಚರಿಸಲಾಯಿತು.


ಸಂಘದ ಅಧ್ಯಕ್ಷರಾದ ಉಮೇಶ್ ಭಾಗ್ವತ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದತ್ತಾತ್ರಯ ಹೆಗಡೆ ಅವರು ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಿದರು.


ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ರಾಮಕೃಷ್ಣ ಹೆಗಡೆ, ಶ್ರೀಪಾದ್ ಗಾಂವ್ಕರ್, ರಾಘವೇಂದ್ರ ಭಟ್ಟ ಸೂತ್ರೆ ಹಾಗೂ ಶ್ರೀನಾಥ್ ಹೆಗಡೆ ಉಪಸ್ಥಿತರಿದ್ದರು. ಅಲ್ಲದೆ ಕೆ.ಡಿ.ಸಿ.ಸಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಶ್ರೀ ಜಿ. ಎಸ್. ಭಟ್ಟ ಇಟ್ಲಮನೆ ಅವರು ಗೌರವ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಸಂಘದ ಸಿಬ್ಬಂದಿಗಳಾದ ಪರಮೇಶ್ವರ್ ಕೋಮಾರ್, ಪ್ರಮೋದ್ ಹೆಬ್ಬಾರ್, ಗಣಪತಿ ಗಾಂವ್ಕರ್, ಉದಯ್ ಭಾಗ್ವತ್, ಶ್ರೀನಾಥ್ ಕಳಸ, ಸುಮನಾ ಗೌಡ, ಶಕೀಲಾ ಕಳಸ್ ಸೇರಿದಂತೆ ಸಂಘದ ಅನೇಕ ಸದಸ್ಯರು ಪಾಲ್ಗೊಂಡಿದ್ದರು. ಇವರೊಂದಿಗೆ ಶಾಲಾ ಮತ್ತು ಅಂಗನವಾಡಿ ಮಕ್ಕಳು, ಪೋಷಕರು, ಗ್ರಂಥಾಲಯ ಇಲಾಖೆಯ ಸಿಬ್ಬಂದಿ ಹಾಗೂ ಅಂಚೆ ಇಲಾಖೆಯ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಶ್ರೀನಂದನ್ ಕೋಮಾರ್ ಅವರು ದೇಶಭಕ್ತಿಯ ಸಂಕೇತವಾದ ‘ವಂದೇ ಮಾತರಂ’ ಗೀತೆಯನ್ನು ಅತ್ಯಂತ ಸುಮಧುರವಾಗಿ ಹಾಗೂ ಲಯಬದ್ಧವಾಗಿ ಪ್ರಸ್ತುತಪಡಿಸಿ ಎಲ್ಲರ ಮನಗೆದ್ದರು.















Leave a Reply