ಯಲ್ಲಾಪುರ: ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ರಾಷ್ಟ್ರಭಕ್ತಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಬ್ಬರೂ ತಮ್ಮ ಮನೆ ಮನೆಗಳಲ್ಲಿ ತಿರಂಗಾ ಧ್ವಜವನ್ನು ಹಾರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದೊಂದಿಗೆ, ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಉಮ್ಮಚ್ಛಗಿಯಿಂದ ಮಂಚೀಕೇರಿವರೆಗೆ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್ಯಾಲಿಯು ಅತ್ಯಂತ ಯಶಸ್ವಿಯಾಗಿ ನಡೆಯಿತು.
ತಿರಂಗಾ ಧ್ವಜದ ಜೈಕಾರಗಳೊಂದಿಗೆ ಆರಂಭವಾದ ಈ ಬೈಕ್ ರ್ಯಾಲಿಯುದ್ದಕ್ಕೂ ದೇಶಭಕ್ತಿಯ ಮಹಾಪೂರವೇ ಹರಿದುಬಂದಿತು. ಸಾರ್ವಜನಿಕರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬಿತ್ತಲು ಆಯೋಜಿಸಲಾಗಿದ್ದ ಈ ರ್ಯಾಲಿಯಲ್ಲಿ ಪಕ್ಷದ ಪ್ರಮುಖ ನಾಯಕರು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪ್ರಮುಖರು ಭಾಗಿ:
ಈ ಸಂದರ್ಭದಲ್ಲಿ ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಮಂಡಳ ಅಧ್ಯಕ್ಷರಾದ ಪ್ರಸಾದ ಹೆಗಡೆ, ಜಿಲ್ಲಾ ಪದಾಧಿಕಾರಿಗಳಾದ ಉಮೇಶ್ ಭಾಗ್ವತ ಹಾಗೂ ರಾಘವೇಂದ್ರ ಭಟ್ಟ ಹಾಸಣಗಿ, ಮಂಡಳ ಪ್ರಧಾನ ಕಾರ್ಯದರ್ಶಿ ನಟರಾಜ ಗೌಡ ಮತ್ತು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘು ಕುಂದರಗಿ ಉಪಸ್ಥಿತರಿದ್ದರು.
ಅಲ್ಲದೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವೀನೀಷ ಭಟ್ಟ, ಕಾರ್ಯದರ್ಶಿ ಬಾಬಣ್ಣ ಪತ್ರೇಕರ, ಮಂಡಳ ಕಾರ್ಯದರ್ಶಿ ರಾಜೇಷ ಉಪ್ಪಾರ, ಯುವಮೋರ್ಚಾ ಕಾರ್ಯದರ್ಶಿ ಪರಶುರಾಮ ಸಿದ್ದಿ, SC ಮೋರ್ಚಾ ಕಾರ್ಯದರ್ಶಿ ವಾಸು ಭೋವಿ, ಶಕ್ತಿ ಕೇಂದ್ರದ ಪ್ರಮುಖರಾದ ಶ್ರೀಪಾದ ಸಂಕದಗುಂಡಿ, ನಾರಾಯಣ ಖಂಡೇಕರ, ರಾಮು ಹೆಗಡೆ, ನಾಗೇಂದ್ರ ಹೆಗಡೆ, ಮೋರ್ಚಾ ಪ್ರಧಾನ ಕಾರ್ಯದರ್ಶಿ ರಘುಪತಿ ಹೆಗಡೆ, ಯುವ ಮೋರ್ಚಾ ಜಿಲ್ಲಾ ಸದಸ್ಯ ಶ್ರೀಧರ ಪಟಗಾರ ಹಾಗೂ ಯುವ ಮೊರ್ಚಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಾನಗೋಡ ಸೇರಿದಂತೆ ಪಕ್ಷದ ಪ್ರಮುಖರು ರ್ಯಾಲಿಯ ಯಶಸ್ಸಿಗೆ ಸಾಕ್ಷಿಯಾದರು.














Leave a Reply