ಯಲ್ಲಾಪುರ: ಚಿಕಿತ್ಸೆ ಸಿಗದೆ ಕಂಗಾಲಾಗಿದ್ದ ಕಟ್ಟಡ ಕಾರ್ಮಿಕರ ಅಹವಾಲಿಗೆ ಜನ ಸೇವಕರು ತಕ್ಷಣ ಸ್ಪಂದಿಸಿದರೆ ಏನಾಗುತ್ತದೆ ಎಂಬುದಕ್ಕೆ ತಾಲೂಕಿನ ಮದನೂರ ಪಂಚಾಯತಿ ವ್ಯಾಪ್ತಿಯ ಖಂಡ್ರನಕೊಪ್ಪ ಗ್ರಾಮದಲ್ಲಿ ನಡೆದ ಇಂದಿನ ಘಟನೆ ಸಾಕ್ಷಿಯಾಗಿದೆ. ಕಾರ್ಮಿಕ ಇಲಾಖೆಯ ಸಂಚಾರಿ ಆರೋಗ್ಯ ಘಟಕದ ವಾಹನ ಸೇವೆಯಿಂದ ವಂಚಿತರಾಗಿದ್ದ ಇಲ್ಲಿನ ಕಾರ್ಮಿಕರ ಸಮಸ್ಯೆಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿಜಯ ಮಿರಾಶಿ ಅವರು ತಕ್ಷಣವೇ ಮುಕ್ತಿ ಕೊಡಿಸಿದ್ದಾರೆ. ಸೇವೆಯಿಂದ ವಂಚಿತರಾಗಿದ್ದ ಕಾರ್ಮಿಕರು ಖಂಡ್ರನಕೊಪ್ಪ ಊರಿನಲ್ಲಿ ದಿನವಿಡೀ ಕಷ್ಟಪಟ್ಟು ದುಡಿಯುವ ಕಟ್ಟಡ ಕಾರ್ಮಿಕರಿದ್ದಾರೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಇವರ ಆರೋಗ್ಯ ರಕ್ಷಣೆಗಾಗಿ ಕಾರ್ಮಿಕ ಇಲಾಖೆಯ ‘ಯಲ್ಲಾಪುರ ಸಂಚಾರಿ ಆರೋಗ್ಯ ಘಟಕದ ವಾಹನ’ ನಿಯಮಿತವಾಗಿ ಗ್ರಾಮಕ್ಕೆ ಭೇಟಿ ನೀಡಿ ಉಚಿತ ತಪಾಸಣೆ ಹಾಗೂ ಔಷಧೋಪಚಾರ ನೀಡಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ವಾಹನದ ಸೇವೆ ಗ್ರಾಮಕ್ಕೆ ಸಿಗುತ್ತಿರಲಿಲ್ಲ. ಇದರಿಂದಾಗಿ ಬಡ ಕಾರ್ಮಿಕರು ಸಣ್ಣಪುಟ್ಟ ಕಾಯಿಲೆಗಳಿಗೂ ದೂರದ ಪಟ್ಟಣದ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಸ್ಥಳದಲ್ಲೇ ಪರಿಹಾರ ಒದಗಿಸಿದ ಮಾಜಿ ಜಿ.ಪಂ. ಸದಸ್ಯ….
ತಮ್ಮ ದೈನಂದಿನ ಆರೋಗ್ಯ ರಕ್ಷಣೆಗೆ ತೊಂದರೆಯಾಗುತ್ತಿರುವುದನ್ನು ಮನಗಂಡ ಗ್ರಾಮದ ಕಾರ್ಮಿಕರು ಒಗ್ಗಟ್ಟಾಗಿ ಹೋಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿಜಯ ಮಿರಾಶಿ ಅವರನ್ನು ಭೇಟಿಯಾದರು. ಕಾರ್ಮಿಕರ ಅಳಲನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಮಿರಾಶಿ ಕ್ಷಣಮಾತ್ರವೂ ವಿಳಂಬ ಮಾಡಲಿಲ್ಲ. ಅಲ್ಲೇ ಸ್ಥಳದಲ್ಲಿದ್ದ ಉನ್ನತ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ನೇರವಾಗಿ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ ಅವರು, “ಖಂಡ್ರನಕೊಪ್ಪ ಬಡ ಕಾರ್ಮಿಕರ ಗ್ರಾಮ. ಇಲ್ಲಿಗೆ ಸಂಚಾರಿ ಆರೋಗ್ಯ ವಾಹನ ಬಾರದೆ ಇರಲು ಕಾರಣವೇನು?” ಎಂದು ಪ್ರಶ್ನಿಸಿದರು. ಬಡವರ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ವಿನಂತಿಸಿದರು. ಅದರ ಪರಿಣಾಮವಾಗಿ, ಕೆಲವೇ ಗಂಟೆಗಳಲ್ಲಿ ಯಲ್ಲಾಪುರ ಸಂಚಾರಿ ಆರೋಗ್ಯ ಘಟಕದ ವಾಹನವು ಖಂಡ್ರನಕೊಪ್ಪ ಊರಿನ ಕಾರ್ಮಿಕರ ದೂರಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಗ್ರಾಮಕ್ಕೆ ಆಗಮಿಸಿತು. ಖಂಡ್ರನಕೊಪ್ಪ ಗ್ರಾಮಸ್ಥರಿಂದ ಕೃತಜ್ಞತೆಯ ಮಹಾಪೂರ”….
ವಿಜಯ ಮಿರಾಶಿ ಅವರಂತಹ ಜನಪರ ಕಾಳಜಿಯಿರುವ ನಾಯಕರನ್ನು ಭೇಟಿಯಾದ ತಕ್ಷಣವೇ ನಮ್ಮ ಕಣ್ಣೆದುರೇ ಅಧಿಕಾರಿಗಳೊಂದಿಗೆ ಮಾತನಾಡಿ ವಾಹನ ಬರುವಂತೆ ಮಾಡಿದ್ದಾರೆ. ಇದು ನಿಜವಾದ ಜನಸೇವೆ,” ಎಂದು ಗ್ರಾಮದ ಹಿರಿಯ ಕಟ್ಟಡ ಕಾರ್ಮಿಕರೊಬ್ಬರು ಸಂತಸ ಹಂಚಿಕೊಂಡಿದ್ದಾರೆ. ಕಾರ್ಮಿಕರ ಮತ್ತು ಬಡವರ ಆರೋಗ್ಯದ ಬಗ್ಗೆ ಇಷ್ಟೊಂದು ವಿಶೇಷ ಕಾಳಜಿ ತೋರಿಸಿದ ವಿಜಯ ಮಿರಾಶಿ ಅವರಿಗೆ ಇಡೀ ಖಂಡ್ರನಕೊಪ್ಪ ಗ್ರಾಮಸ್ಥರು ಹಾಗೂ ಕಾರ್ಮಿಕ ಬಂಧುಗಳು ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಮಾತು ಕೊಟ್ಟ ತಕ್ಷಣವೇ ಕೆಲಸ ಮುಗಿಸಿದ ಜನನಾಯಕ: ವಿಜಯ ಮಿರಾಶಿಯವರ ಸ್ಪಂದನೆಗೆ ಕಾರ್ಮಿಕರು ಭಾವುಕ!














Leave a Reply