ಯಲ್ಲಾಪುರ: “ಶಿಕ್ಷಣವೇ ನಿಜವಾದ ಶಕ್ತಿ ಮತ್ತು ಉಜ್ವಲ ಭವಿಷ್ಯದ ಬುನಾದಿ. ವಿದ್ಯಾರ್ಥಿಗಳು ಯಾವುದೇ ಆರ್ಥಿಕ ತೊಂದರೆಯಿಲ್ಲದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಅನುಕೂಲವಾಗುವಂತೆ ಉಚಿತ ಶಾಲಾ ಬ್ಯಾಗ್ ಹಾಗೂ ಅಗತ್ಯ ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿದ್ದೇನೆ” ಎಂದು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಬಾಲು ನಾಯಕ ಹೇಳಿದರು.
ಅವರು ಗುರುವಾರ ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಸರ್ಕಾರಿ ಶಾಲೆ ಹಾಗೂ ಯರೇಬೈಲ್ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು, “ಮಕ್ಕಳಿಗೆ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ವಿತರಣೆಯಂತಹ ಸತ್ಕಾರ್ಯವು ಅವರಲ್ಲಿ ಶಿಕ್ಷಣದ ಬಗ್ಗೆ ಒಲವು ಮೂಡಿಸುವುದರೊಂದಿಗೆ, ಆತ್ಮವಿಶ್ವಾಸದಿಂದ ಶಾಲೆಗೆ ಹಾಜರಾಗಲು ಮತ್ತು ಸಾಧನೆ ಮಾಡಲು ದೊಡ್ಡ ಪ್ರೇರಣೆಯಾಗಲಿದೆ” ಎಂದರು.
ಈ ಸಂದರ್ಭದಲ್ಲಿ ಎರಡು ಶಾಲೆಯ ಎಸ್ಡಿಎಮ್ಸಿ (SDMC) ಅಧ್ಯಕ್ಷರಾದ ಪರಶುರಾಮ ಗೌಡಣ್ಣನವರ್ ಹಾಗೂ ರಾಮು ಎಡಗೆ, ಉಪಾಧ್ಯಕ್ಷರಾದ ಶಕುಂತಲಾ ಯಮಕರ ಮತ್ತು ಮುಖ್ಯೋಪಾಧ್ಯಾಯರಾದ ಮುತ್ತುರಾಜ್,
ಹಾಗೂ ಊರಿನ ಹಿರಿಯರು ಮತ್ತು ಪ್ರಮುಖ ಮುಖಂಡರುಗಳಾದ ಮಾಲು ವರಕ್, ವಸಂತ್ ಕಲ್ಯಾಣಕರ್, ಗಂಗಾರಾಮ್ ವರಕ್, ಲಕ್ಕು ಯಾಮಕರ್, ಸೋನು ಬಿಚ್ಚುಕಲೆ, ವಿಠ್ಠಲ್ ವರಕ್, ಸಂಗಯ್ಯ ಹಿರೇಮಠ, ಸಂತೋಷ್ ವರಕ್, ಟಕ್ಕು ಖರಾತ್, ಬಾಬು ಯಮಕರ್, ಮಹಾಂತೇಶ ಹಿರೇಮಠ, ಅಂಬಾಜಿ ಶೇಳಕೆ, ದೊಂಡು ಕೊಕರೆ, ಕೊಂಡು ಯಮಕರ್, ಮತ್ತು ಇಂಜು ಶಿಂಧೆ ಸೇರಿದಂತೆ ಶಾಲಾ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.














Leave a Reply