ಇದು ಹೆಬ್ಬಾರ್ ಸ್ಟೈಲ್ : ನುಡಿದಂತೆ ಅಂಗನವಾಡಿ ನಿರ್ಮಿಸಿ ಕೊಟ್ಟ ಶಾಸಕ!!!

ಹಂಚಿಕೊಳ್ಳಿ

ಯಲ್ಲಾಪುರ, ಆಗಸ್ಟ್ 1: ಕಳೆದ ವರ್ಷ ಡೋಮಗೇರಿ ಗೌಳಿವಾಡ ಕ್ರಾಸ್ ಬಳಿ ನಡೆದಿದ್ದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡಿದ್ದ ಭರವಸೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಅವರು ಈಡೇರಿಸಿದ್ದಾರೆ. ಇಂದು ಡೋಮಗೇರಿ ಗೌಳಿವಾಡದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸುವ ಮೂಲಕ ಅವರು ತಮ್ಮ ಮಾತನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕಳೆದ ವರ್ಷ ಡೋಮಗೇರಿ ಅಂಗನವಾಡಿಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ಮರ ಬಿದ್ದು, ಅವರು ಮೃತಪಟ್ಟ ಅತ್ಯಂತ ಕರಳು ಹಿಂಡುವ ಘಟನೆ ನಡೆದಿತ್ತು. ಈ ದುರ್ಘಟನೆ ಸಂಭವಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಶಿವರಾಮ ಹೆಬ್ಬಾರ್ ಅವರು, ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಅಲ್ಲದೆ, “ಡೋಮಗೇರಿ ಗೌಳಿವಾಡದಲ್ಲೇ ನೂತನ ಅಂಗನವಾಡಿ ಕೇಂದ್ರವನ್ನು ಆರಂಭಿಸಲಾಗುವುದು” ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು.

ಇಂದು ಆ ಭರವಸೆಯನ್ನು ಈಡೇರಿಸುವ ಮೂಲಕ ಶಾಸಕರು ನೂತನ ಅಂಗನವಾಡಿ ಕೇಂದ್ರವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿಜಯ ಮಿರಾಶಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ತಾಲೂಕಾಧ್ಯಕ್ಷರಾದ ಮಾಕು ಕೊಕರೆ ಸೇರಿದಂತೆ ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು, ಧನಗರ ಗೌಳಿ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *