ಯಲ್ಲಾಪುರದಲ್ಲಿ ನೂತನ ಫೋಟೋಗ್ರಾಫರ್ಸ್ ಸಂಘ ಉದ್ಘಾಟನೆ: ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್, ಕಾರ್ಯದರ್ಶಿಯಾಗಿ ಗಣೇಶ ಪತ್ತಾರ್  ಆಯ್ಕೆ

ಹಂಚಿಕೊಳ್ಳಿ

ಯಲ್ಲಾಪುರ: ಸ್ಥಳೀಯ ಫೋಟೋಗ್ರಾಫರ್‌ಗಳ ಹಿತರಕ್ಷಣೆ ಮತ್ತು ವೃತ್ತಿಪರ ಬೆಳವಣಿಗೆಯ ಉದ್ದೇಶದೊಂದಿಗೆ ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಫೋಟೋಗ್ರಾಫರ್ಸ್ ಸಂಘ’ವನ್ನು ಶುಕ್ರವಾರ ಯಶಸ್ವಿಯಾಗಿ ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಮುಂದಿನ ಅವಧಿಯ ಚಟುವಟಿಕೆಗಳ ಮುನ್ನಡೆಗಾಗಿ ನೂತನ ಪದಾಧಿಕಾರಿಗಳ ಕಾರ್ಯಕಾರಿ ಮಂಡಳಿಯನ್ನು ಸರ್ವಾನುಮತದಿಂದ ಆರಿಸಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ಹಿರಿಯರಾದ ಗಣಪತಿ ಆರ್. ಹೆಗಡೆ ಹಾಗೂ ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್ ಕಂಚಿಕುಳಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಪ್ರಮುಖ ಜವಾಬ್ದಾರಿಗಳಿಗೆ ವೃತ್ತಿಪರರನ್ನು ನೇಮಕ ಮಾಡಲಾಗಿದ್ದು, ಸಂಘದ ಬಲವರ್ಧನೆಗೆ ಒತ್ತು ನೀಡಲಾಗಿದೆ. ಗೌರವಾಧ್ಯಕ್ಷರಾಗಿ ಗಣಪತಿ ಆರ್ ಹೆಗಡೆ, ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್ ಕಂಚಿಕುಳಿ, ಉಪಾಧ್ಯಕ್ಷರಾಗಿ ವಿನಾಯಕ ಗುಮ್ಮಾನಿ ಕಾರ್ಯದರ್ಶಿಯಾಗಿ ಗಣೇಶ ಪತ್ತಾರ ಖಜಾಂಚಿಯಾಗಿ ಚಂದ್ರಶೇಖರ ಭಟ್ ಸಂಘಟನಾ ಕಾರ್ಯದರ್ಶಿಯಾಗಿ ಶಶಿಕಾಂತಯ್ಯ ಆರ್ ಬಿ , ಜಂಟಿ ಕಾರ್ಯದರ್ಶಿಯಾಗಿ ಮೋಹನ್ ಅವರ್ಸಾ , ಆಸರೆ ಯೋಜನೆ ಮೇಲ್ವಿಚಾರಕರಾಗಿ ರಾಕೇಶ್ ಡೊಂಗರೆಕರ್ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು‌. ನೂತನವಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಗುರುಮೂರ್ತಿ ಗಾಂವ್ಕರ್ ಮಾತನಾಡಿ, ತಾಲೂಕಿನ ಎಲ್ಲಾ ಛಾಯಾಗ್ರಾಹಕರನ್ನು ಒಗ್ಗೂಡಿಸಿ, ಅವರ ಕಲ್ಯಾಣಕ್ಕಾಗಿ ಹಾಗೂ ವೃತ್ತಿಪರ ಸಮಸ್ಯೆಗಳ ಪರಿಹಾರಕ್ಕಾಗಿ ನೂತನ ಸಮಿತಿಯು ಶ್ರದ್ಧೆಯಿಂದ ಶ್ರಮಿಸಲಿದೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಮುಖ ಫೋಟೋಗ್ರಾಫರ್‌ಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳ ತಂಡಕ್ಕೆ ಯಶಸ್ಸನ್ನು ಕೋರಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *