ಶಿರಸಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿಶೇಷ ಕರ್ತವ್ಯಾಧಿಕಾರಿ ನಾಗರಾಜ ಅವರು ನಗರದ ರಾಜ್ಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಅವರು, ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ದೇವಾಲಯದಲ್ಲಿ ಕೆಲಕಾಲ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಅವರು, ದೇವಾಲಯದ ಇತಿಹಾಸ ಹಾಗೂ ಧಾರ್ಮಿಕ ಮಹತ್ವದ ಕುರಿತು ಮಾಹಿತಿ ಪಡೆದರು.
ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ನಾಗರಾಜ ಅವರಿಗೆ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗರಾಜ ಮಡಿವಾಳ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವಿ ಬೆಳ್ಳಿಮನೆ, ಧರ್ಮದರ್ಶಿ ಕೇಶವ ಹೆಗಡೆ, ದೊಡ್ನಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ತಿರುಮಲೇಶ್ವರ ಮಡಿವಾಳ ಪ್ರಮುಖರಾದ ಚಂದ್ರು ಮಡಿವಾಳ, ಶ್ರೀಧರ ಹೆಗಡೆ, ನವೀನ ಗೌಡ, ಜಗದೀಶ ನಾಯ್ಕ ಮಿಸಗುಂದ್ಲಿ, ಮಿಥುನ ಸೇರಿದಂತೆ ಮತ್ತಿತರರು ಇದ್ದರು.
ಉತ್ತರ ಕನ್ನಡ ಪ್ರವಾಸ: ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಭೇಟಿ














Leave a Reply