ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಮಹಾದಾನಿ:  ಬಾಲು ನಾಯಕ್ ಅವರಿಂದ 2300ಕ್ಕೂ ಹೆಚ್ಚು ಉಚಿತ ಬ್ಯಾಗ್, ಪಟ್ಟಿ ವಿತರಣೆ!!!!

ಹಂಚಿಕೊಳ್ಳಿ

ಯಲ್ಲಾಪುರ: ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಹಾಗೂ ಪಟ್ಟಿ (ನೋಟ್‌ಬುಕ್) ವಿತರಣಾ ಕಾರ್ಯಕ್ರಮವು ಶುಕ್ರವಾರ ಅತ್ಯಂತ ಯಶಸ್ವಿಯಾಗಿ ಜರುಗಿತು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ  ಸಾಮಾಜಿಕ ಕಾರ್ಯಕರ್ತ  ,ಮುಖಂಡ ಬಾಲಕೃಷ್ಣ ನಾಯಕ  ಅವರ ನೇತೃತ್ವದಲ್ಲಿ ಈ ಬೃಹತ್ ಶೈಕ್ಷಣಿಕ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸದಾ ಹಸ್ತ ಚಾಚುವ ಇವರು, ಈ ಅಭಿಯಾನದ ಮೂಲಕ ಈಗಾಗಲೇ 2300ಕ್ಕೂ ಅಧಿಕ ಶಾಲಾ ಬ್ಯಾಗ್ ಹಾಗೂ ಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿ ಗಮನ ಸೆಳೆದಿದ್ದಾರೆ.

ವೇಳಾಪಟ್ಟಿಯಂತೆ ಯಶಸ್ವಿ ವಿತರಣೆ:
ನಿಗದಿತ ಸಮಯದಂತೆ ಶುಕ್ರವಾರ ಬೆಳಿಗ್ಗೆ 10:30ಕ್ಕೆ ಜಯಂತಿನಗರದಲ್ಲಿ ಹಾಗೂ ನಂತರ 11:30ಕ್ಕೆ ಹೊಸಹಳ್ಳಿಯಲ್ಲಿ ಬ್ಯಾಗ್ ಮತ್ತು ಪಟ್ಟಿಗಳ ವಿತರಣಾ ಕಾರ್ಯಕ್ರಮಗಳು ನಡೆದವು. ಶಾಲಾ ಪರಿಕರಗಳನ್ನು ಪಡೆದ ಶಾಲಾ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದ್ದು ಕಂಡುಬಂತು. ಸಮಾಜ ಸೇವಕ ಬಾಲಕೃಷ್ಣ ನಾಯಕ ಬ್ಯಾಗ್ ಹಾಗೂ ನೊಟ್ ಬುಕ್ ವಿತರಣೆ ಮಾಡಿ ಮಾತನಾಡಿ “ಶಿಕ್ಷಣ ನಮ್ಮ ಭವಿಷ್ಯ, ಮಕ್ಕಳ ಶಿಕ್ಷಣಕ್ಕೆ ನಮ್ಮ ಬದ್ಧತೆ” ಎಂಬ ಧ್ಯೇಯದೊಂದಿಗೆ ಗ್ರಾಮೀಣ ಭಾಗದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮದನೂರು ಪಂಚಾಯತ್ ಪ್ರಮುಖರಾದ ಮಹೇಶ್ ದೇಸಾಯಿ, ಮದನೂರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಟ್ಟು ಸೆಳಕೆ, ಕಿರವತ್ತಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹೀರು ಶಿಂಡೆ, ತೇರೇಜಾ ಫರ್ನಾಂಡಿಸ್, ಬಾಬು ಜಾನಕರ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವಿಠ್ಠಲ್ ಪಂಡಾರಮಿಸೆ ಮತ್ತು ಪ್ರಭು ಚಿಚ್ಕಂಡಿ ಉಪಸ್ಥಿತರಿದ್ದರು.

ಸಾಮಾಜಿಕ ಚಿಂತಕರಾದ ಸೇಸಗೇರಿ, ಕಿರವತ್ತಿ ಭಾಗದ ಡಿಎಸ್ಎಸ್ ಸಂಘಟನೆಯ ಪ್ರಮುಖರಾದ ಅರ್ಜುನ್ ಬೆಂಗೇರಿ, ಪ್ರಮುಖರಾದ ಸಂಜಯ್ ಶ್ರೀಕಾಂತ್ ಮೀರಾಶಿ, ಮಾಲಶೇಟ್, ಹೊಸ್ಸಳ್ಳಿಯ ಪರಶುರಾಮ ತೀರಕಪ್ಪನವರು,  ಕೇಶವ ಕಾಂಬಳೆ, ಮಂಜುನಾಥ್ ಕೊರ್ವರ್, ನಾನಾಜಿ ದೇಸಾಯಿ, ಯಲವಳ್ಳಿಯ ಸೋನು ಜಂಗ್ಲೆ ಹಾಗೂ ನವಲು ಅಲ್ಕೆರಿ ,

ಶೈಕ್ಷಣಿಕ ಪ್ರಮುಖರಾದ ಹೊಸ್ಸಳ್ಳಿ ಎಸ್‌ಡಿಎಂಸಿ ಅಧ್ಯಕ್ಷರಾದ ಆನಂದ್ ಶೆಟ್ಟಿ, ಉಪಾಧ್ಯಕ್ಷರಾದ ಬಮ್ಮು ಪಟಕಾರೆ, ಜಯಂತಿನಗರ ಎಸ್‌ಡಿಎಂಸಿ ಅಧ್ಯಕ್ಷರಾದ ಕವಿತಾ ಹರಿಜನ್, ಪ್ರಮುಖರಾದ ಚನ್ನಬಸಪ್ಪ, ಲಕ್ಷ್ಮಣ ಹೋಳೀ, ಮಲ್ಲೇಶಿ ಕಿಲಾರಿ, ಮಾರೋತಿ ಕಾಣಪ್ಪನವರು, ಲಕ್ಷ್ಮಣ ಚಿನ್ನಪ್ಪಗೋಳ್, ಉದಯ್ ಶಿಂಡೆ, ದೇವರಾಜ್ ಗಸ್ತಿ, ತುಕಾರಾಮ್ ಎಡಗೆ ಮತ್ತು ಶಂಕರ್ ಕಾಂಬಳೆ ಉಪಸ್ಥಿತರಿದ್ದರು.

ಊರಿನ ಹಿರಿಯರಾದ ವಿಟ್ಟು ಜಾನಕರ, ಅಬ್ಬು ಡೊಯಿಪೊಡೆ, ತುಕಾರಾಮ ಎಡಗೆ, ಸೋನು ಡೊಯಿಪೊಡೆ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *