ಮೆಡಿಕಲ್ ಟೆಸ್ಟ್‌ನಲ್ಲೂ ‘ಪಾಸ್’ ಆದ ಮುಸ್ತಾಕ್‌ಗೆ ಈಗ ಖಾಕಿ ಆತಿಥ್ಯ! ನೋಡಿ ಈ  ಕುತೂಹಲಕರ ಸುದ್ದಿ

ಹಂಚಿಕೊಳ್ಳಿ

ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಅಮಲಿನಲ್ಲಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಕಸ್ತೂರಬಾನಗರದ ಮುಸ್ತಾಕ್ ಅಹ್ಮದ್ ಅಬ್ದುಲ್ ರೆಹಮಾನ್ ಹೊಸಪೇಟ್ (27) ಬಂಧಿತ ವ್ಯಕ್ತಿ.
ಈತ ನಗರದ ಆನೆಹೊಂಡದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಅಮಲಿನಲ್ಲಿದ್ದ ವೇಳೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ನಾರಾಯಣ ರಾಠೋಡ್ ನೇತೃತ್ವದಲ್ಲಿ ವಶಕ್ಕೆ ಪಡೆದು ಪಂಡಿತ ಸಾರ್ವಜನಿಕ ಅಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಪರೀಕ್ಷಿಸಿದ ವೈದ್ಯರು ಗಾಂಜಾ ಸೇವಿಸಿರುವುದನ್ನು ದೃಢಪಡಿಸಿದ್ದಾರೆ. ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಸಂಪತ್.ಇ.ಸಿ ಮಾರ್ಗದರ್ಶನ ಶಿರಸಿ ನಗರ ಪೊಲೀಸ್ ಠಾಣೆಯ ತನಿಖಾ ಪಿ.ಎಸ್.ಐ ನಾರಾಯಣ ರಾಠೋಡ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ಸದ್ದಾಮ್ ಹುಸೇನ್, ಸುನಿಲ್, ಪ್ರಶಾಂತ್, ರಾಜಶೇಖರ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *