ಮಾವಿನಮನೆ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 54 ಲಕ್ಷಕ್ಕೂ ಅಧಿಕ ನಿವ್ವಳ ಲಾಭ:  ಸುಬ್ಬಣ್ಣ ಬೊಳ್ಮನೆ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲೊಂದಾದ ಮಾವಿನಮನೆ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಧಾರಣ ಸಭೆಯು ಬುಧವಾರ ತಾಲೂಕಿನ ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ಸಭಾ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೊಳ್ಮನೆ ಮಾತನಾಡಿ ” 66 ವರ್ಷಗಳ ಸುದೀರ್ಘ ಇತಿಹಾಸವಿರುವ  ನಮ್ಮ ಸಂಘ ಸದಸ್ಯರ ನಿರಂತರ ವಿಶ್ವಾಸ ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಶ್ರಮದಿಂದಾಗಿ ಸಂಘವು ಪ್ರಸಕ್ತ ಸಾಲಿನಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಈ ವರ್ಷ ಒಟ್ಟಾರೆ 54 ಲಕ್ಷ ರೂಪಾಯಿಗಳಿಗೂ ಅಧಿಕ ನಿವ್ವಳ ಲಾಭ ಗಳಿಸುವ ಮೂಲಕ ಸಂಸ್ಥೆಯು ಆರ್ಥಿಕವಾಗಿ ಮತ್ತಷ್ಟು ಸಧೃಡವಾಗಿ ಹೊರಹೊಮ್ಮಿದೆ. ಸಂಘವು ತನ್ನ ಶೇರು ಸದಸ್ಯರಿಗೆ 8.50% ರಂತೆ  2547080 ರೂ ಗಳನ್ನು  ಡಿವಿಡೆಂಡ್ ಆಗಿ ನೀಡಿದೆ.  “ಸಂಘದ ಮೂಲಕ ಮಹಸೂಲು (ಬೆಳೆ) ಮಾರಾಟ ಮಾಡಿದ ಸದಸ್ಯರಿಗೆ ಒಟ್ಟಾರೆ 12,57,190 ರೂಪಾಯಿಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗಿದೆ. ಹಾಗೆಯೇ, ಸಂಘದ ಕಿರಾಣಿ ಶಾಖೆಯಲ್ಲಿ ವ್ಯವಹಾರ ನಡೆಸಿದ ಗ್ರಾಹಕರಿಗೆ 1,97,242 ರೂಪಾಯಿಗಳನ್ನು ಪ್ರೋತ್ಸಾಹ ಧನವಾಗಿ ವಿತರಿಸಲಾಗಿದೆ,” ಎಂದರು.


ಮುಖ್ಯ ಅತಿಥಿಗಳಾದ ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸಾಯಟಿ ಅಧ್ಯಕ್ಷರಾದ ಎನ್. ಕೆ. ಭಟ್ ಅಗ್ಗಾಶಿಕುಂಬ್ರಿ ಮಾತನಾಡಿ, “ಮಾವಿನಮನೆ ಸೇವಾ ಸಹಕಾರಿ ಸಂಘವು ಗ್ರಾಮೀಣ ಭಾಗದ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವಲ್ಲಿ ಮತ್ತು ಶಿಸ್ತುಬದ್ಧ ಆಡಳಿತದ ಮೂಲಕ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ತಾಲೂಕಾ ಮಾರ್ಕೆಟಿಂಗ್ ಸೊಸಾಯಟಿಯು ಈ ಸಂಘದ ಮಾರುಕಟ್ಟೆ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡಲಿದೆ ಎಂದರು.
ಕಾರ್ಯಕ್ರಮದ ಇನ್ನೊರ್ವ ಅತಿಥಿಗಳಾದ ಸಹ್ಯಾದ್ರಿ ಸೇವಾ ಸಹಕಾರಿ ಸಂಘ ಕಳಚೆಯ ಅಧ್ಯಕ್ಷ ಉಮೇಶ ಭಾಗ್ವತ್ ಮಾತನಾಡಿ , ಇತ್ತಿಚಿಗೆ ಅಡಿಕೆ ಕಾಳು ಮೆಣಸು ಬೆಳೆಗಾರರು ವಿವಿಧ ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅಂತವರ ಜೊತೆ ಸಹಕಾರಿ ಸಂಘಗಳು ಸದಾ ಜೊತೆಯಲ್ಲಿ ಇರುತ್ತದೆ ಎಂದರು.

ಅತಿಥಿಗಳಾದ ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ ತಾರಗಾರ ಮಾತನಾಡಿ, ಸಹಕಾರಿ ಸಂಸ್ಥೆಗಳು ಬಲಿಷ್ಠವಾದಾಗ ಮಾತ್ರ ಗ್ರಾಮೀಣ ಆರ್ಥಿಕತೆ ಸುಧಾರಿಸಲು ಸಾಧ್ಯ ಎಂದರು.
ಇದಕ್ಕೂ ಮುನ್ನ ಸಂಘದ ಉಪಾಧ್ಯಕ್ಷ ರವಿ ಹುಳ್ಸೆ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿ, ಸಹಕಾರಿ ಸಂಘದ ಏಳಿಗೆಯಲ್ಲಿ ಗ್ರಾಹಕರ ಮತ್ತು ಷೇರುದಾರರ ಪಾತ್ರ ದೊಡ್ಡದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾವಿನಮನೆ ಸೇವಾ ಸಹಕಾರಿ ಸಂಘದ ಸದಸ್ಯರಾದ ಸುಬ್ಬಣ್ಣ ಕುಂಟೆಗಾಳಿ, ಶಿವರಾಮ ಭಟ್ ಬಾಸಲ್ , ಗಣಪತಿ ಗಾಂವ್ಕರ್ ಕಾನೂರ , ಗಣಪತಿ ಭಟ್ ಗೋಪನಪಾಲ, ಮಹಾಬಲೇಶ್ವರ ವರದಮನೆ, ರಸ್ಮಾ ಕುಣಬಿ, ಮೋಹನ ಮಡಿವಾಳ, ಶಾರದಾ ಭಟ್, ಸವಿತಾ ಭಟ್, ಕೊಲ್ಲಪ್ಪ ಪೂಜಾರಿ ವೇದಿಕೆಯಲ್ಲಿದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದತ್ತಾತ್ರೇಯ ಗಾಂವ್ಕರ ನೆಲೆಪಾಲ ಅವರು ವಾರ್ಷಿಕ ಆಯವ್ಯಯದ ವರದಿಯನ್ನು ವಾಚಿಸಿ, ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೊನೆಯಲ್ಲಿ ಸಂಘದ ಸದಸ್ಯರಾದ ಮಹಾಬಲೇಶ್ವರ ವರದನಮನೆ ಸಭೆಯಲ್ಲಿ ಉಪಸ್ಥಿತರಿದ್ದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿ ವಂದನಾರ್ಪಣೆ ಮಾಡಿದರು. ಪ್ರಮುಖ ಸಹಕಾರಿಗಳು, ಷೇರುದಾರರು ಹಾಗೂ ಮಲವಳ್ಳಿ ಸುತ್ತಮುತ್ತಲಿನ ನೂರಾರು ಗ್ರಾಹಕರು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು. ಸಂಜೆ 7:30 ರಿಂದ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ತಂಡದಿಂದ “ಚಂದ್ರಹಾಸ ಚರಿತ್ರೆ” ಯಕ್ಷಗಾನ ಅದ್ದೂರಿಯಾಗಿ ನಡೆಯಿತು.

Leave a Reply

Your email address will not be published. Required fields are marked *