108 ದಿನಗಳ ಇರಾನ್-ಅಮೆರಿಕ ಸಂಘರ್ಷಕ್ಕೆ ಕೊನೆಗೂ ತೆರೆ: 14 ಪ್ರಮುಖ ಅಂಶಗಳಡಿ ಐತಿಹಾಸಿಕ ಶಾಂತಿ ಒಪ್ಪಂದ!

ಹಂಚಿಕೊಳ್ಳಿ

ವಾಷಿಂಗ್ಟನ್: ವಿಶ್ವವನ್ನೇ ಆತಂಕಕ್ಕೆ ತಳ್ಳಿದ್ದ ಇರಾನ್ ಮತ್ತು ಅಮೆರಿಕ (US-Iran War) ನಡುವಿನ 108 ದಿನಗಳ ಸುದೀರ್ಘ ಹಾಗೂ ಭೀಕರ ಸಂಘರ್ಷ ಕೊನೆಗೂ ಅಂತ್ಯಗೊಂಡಿದೆ. ಉಭಯ ರಾಷ್ಟ್ರಗಳ ಮುಖಂಡರು ಸುದೀರ್ಘ ಮಾತುಕತೆ ನಡೆಸಿದ್ದು, ಜಾಗತಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಭವಿಷ್ಯದ 14 ಪ್ರಮುಖ ಅಂಶಗಳ ಆಧಾರದ ಮೇಲೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಶಾಂತಿ ಸ್ಥಾಪನೆ, ತಕ್ಷಣದ ಕದನ ವಿರಾಮ, ಹಾರ್ಮುಜ್ ಜಲಸಂಧಿ ಮುಕ್ತಗೊಳಿಸುವುದು, ಮಿಲಿಟರಿ ಪಡೆಗಳ ಹಿಂಪಡೆಯುವಿಕೆ ಹಾಗೂ ಇರಾನ್ ದೇಶದ ಪುನರ್ ನಿರ್ಮಾಣ ವೆಚ್ಚ ಸೇರಿದಂತೆ 14 ಪ್ರಮುಖ ಒಪ್ಪಂದಗಳು ಇದರಲ್ಲಿ ಸೇರಿವೆ.

ಒಪ್ಪಂದದ ಆ 14 ಪ್ರಮುಖ ಅಂಶಗಳು ಇಲ್ಲಿವೆ:

  • ಲೆಬನಾನ್ ಸೇರಿದಂತೆ ಎರಡೂ ದೇಶಗಳ ನಡುವಿನ ಎಲ್ಲಾ ರಂಗಗಳಲ್ಲೂ ತಕ್ಷಣದ ಮತ್ತು ಶಾಶ್ವತ ಕದನ ವಿರಾಮ ಘೋಷಣೆ.

  • ಇರಾನ್ ದೇಶದ ಆಂತರಿಕ ವ್ಯವಹಾರಗಳಲ್ಲಿ ಇನ್ಮುಂದೆ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡದಿರಲು ಅಮೆರಿಕದ ಬದ್ಧತೆ.

  • ಮುಂದಿನ 30 ದಿನಗಳ ಒಳಗಾಗಿ ಜಾಗತಿಕ ತೈಲ ಸಾರಿಗೆಯ ಪ್ರಮುಖ ಕೊಂಡಿಯಾದ ‘ಹಾರ್ಮುಜ್ ಜಲಸಂಧಿ’ಯ (Strait of Hormuz) ನೌಕಾ ದಿಗ್ಬಂಧನ ಅಂತ್ಯ ಮತ್ತು ಅದರ ಪುನರ್ ಆರಂಭ.

  • ಇರಾನ್ ಗಡಿಯ ಸುತ್ತಮುತ್ತಲಿನ ಆಯಕಟ್ಟಿನ ಪ್ರದೇಶಗಳಿಂದ ಅಮೆರಿಕದ ಮಿಲಿಟರಿ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದು.

  • ಇರಾನ್ ಮೇಲಿದ್ದ ತೈಲ ಸಂಬಂಧಿತ ಕಠಿಣ ಆರ್ಥಿಕ ನಿರ್ಬಂಧಗಳನ್ನು ಸ್ಥಗಿತಗೊಳಿಸುವುದು ಮತ್ತು ಇರಾನ್ ತನ್ನ ಸ್ಥಗಿತಗೊಂಡ ಆದಾಯವನ್ನು ಮರಳಿ ಪಡೆಯಲು ಪ್ರವೇಶ ಕಲ್ಪಿಸುವುದು.

  • ಯುದ್ಧದಿಂದ ಹಾನಿಗೊಳಗಾದ ಇರಾನ್‌ನ ಪುನರ್ನಿರ್ಮಾಣಕ್ಕಾಗಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಂದ 300 ಬಿಲಿಯನ್ ಡಾಲರ್ ಬೃಹತ್ ನಿಧಿ ಸ್ಥಾಪನೆ.

  • ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಇತರೆ ವಿಶಾಲ ನಿರ್ಬಂಧಗಳ ಶಾಶ್ವತ ಪರಿಹಾರದ ಮೇಲೆ ಕೇಂದ್ರೀಕರಿಸಲು ಮುಂದಿನ 60 ದಿನಗಳ ಕಾಲ ಉನ್ನತ ಮಟ್ಟದ ಮಾತುಕತೆ.

  • ತಾನು ಎನ್‌ಪಿಟಿ (NPT) ಒಪ್ಪಂದದ ಅಡಿಯಲ್ಲಿ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಇರಾನ್ ಮತ್ತೊಮ್ಮೆ ಪುನರುಚ್ಚರಿಸುವುದು.

  • ಈ ಶಾಂತಿ ಮಾತುಕತೆಗಳು ನಡೆಯುವ ಅವಧಿಯಲ್ಲಿ ಇರಾನ್ ಗಡಿಗೆ ಯಾವುದೇ ಹೊಸ ಯುಎಸ್ ಪಡೆಗಳನ್ನು ನಿಯೋಜಿಸದಂತೆ ನಿರ್ಬಂಧ.

  • ಮಾತುಕತೆಯ ಮಧ್ಯಂತರ ಅವಧಿಯಲ್ಲೇ ಅಮೆರಿಕದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಇರಾನಿನ ಸ್ವತ್ತುಗಳಲ್ಲಿ 24 ಬಿಲಿಯನ್ ಡಾಲರ್‌ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವುದು.

  • ಇಡೀ ಒಪ್ಪಂದದ ಮೇಲ್ವಿಚಾರಣಾ ಕಾರ್ಯವಿಧಾನದ ರಚನೆ ಮತ್ತು ಅಂತಿಮ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಅಧಿಕೃತ ಅನುಮೋದನೆ ಪಡೆಯುವುದು.

  • ಇರಾನ್ ದೇಶದ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳು ಮತ್ತು ಪ್ರಾದೇಶಿಕ ಮಿತ್ರ ಸಂಘಟನೆಗಳಿಗೆ ಇರಾನ್ ನೀಡುತ್ತಿರುವ ಬೆಂಬಲದ ವಿಷಯಗಳನ್ನು ಪ್ರಸ್ತುತ ಶಾಂತಿ ಮಾತುಕತೆಯಿಂದ ಹೊರಗಿಡುವುದು.

Leave a Reply

Your email address will not be published. Required fields are marked *

Advertisement


This will close in 3 seconds