ಹಳ್ಳಿನ್ಯೂಸ್ ವರದಿ : ಯಲ್ಲಾಪುರ: ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಅವರು ಶುಕ್ರವಾರ ಬೆಳಿಗ್ಗೆ ಯಲ್ಲಾಪುರ ಪಟ್ಟಣ ಪೊಲೀಸ್ ಠಾಣೆ ಎದುರಿನ ರಾಮಕೃಷ್ಣ ಭವನ ಹೋಟೆಲ್‌ನಲ್ಲಿ ಉಪಹಾರ ಸೇವಿಸಿದರು.
ಗೋಕರ್ಣ ಹಾಗೂ ಶ್ರೀಕ್ಷೇತ್ರ ಬಂಗಾರಮಕ್ಕಿಗೆ ತೆರಳುವ ಮಾರ್ಗದಲ್ಲಿ ಯಲ್ಲಾಪುರಕ್ಕೆ ಆಗಮಿಸಿದ ಸ್ಮೃತಿ ಮಂದಾನ, ಗಿರೀಶ ಭಾಗ್ವತ್ ಅವರ ಮಾಲೀಕತ್ವದ ರಾಮಕೃಷ್ಣ ಭವನದಲ್ಲಿ ತಮ್ಮ ಕುಟುಂಬದೊಂದಿಗೆ ಉಪಹಾರ ಸೇವಿಸಿದರು.
ಸ್ಮೃತಿ ಮಂದಾನ ಅವರ ಆಗಮನಕ್ಕೂ ಮುನ್ನ ಅವರ ಭದ್ರತಾ ಸಿಬ್ಬಂದಿ ಹೋಟೆಲ್‌ನ ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಬಳಿಕ ಸ್ಮೃತಿ ಮಂದಾನ ಅವರು ಕುಟುಂಬದ ಸದಸ್ಯರೊಂದಿಗೆ ಉಪಹಾರ ಸೇವಿಸಿದರು.
ಹೋಟೆಲ್‌ನ ಉಪಹಾರದ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಹೆಚ್ಚುವರಿ ಉಪಹಾರವನ್ನು ಪಾರ್ಸಲ್ ಮಾಡಿಕೊಂಡು ತಮ್ಮ ಪ್ರಯಾಣ ಮುಂದುವರಿಸಿದರು.
ಖ್ಯಾತ ಕ್ರಿಕೆಟ್ ಆಟಗಾರ್ತಿ ಯಲ್ಲಾಪುರದ ಹೋಟೆಲ್‌ಗೆ ಭೇಟಿ ನೀಡಿ ಉಪಹಾರ ಸೇವಿಸಿದ ವಿಷಯ ಸ್ಥಳೀಯರಲ್ಲಿ ಗಮನ ಸೆಳೆಯಿತು.















Leave a Reply