
ಯಲ್ಲಾಪುರ. 26.
ಯಲ್ಲಾಪುರ ತಾಲೂಕಿನ ಇಡಗುಂದಿ ಸಮೀಪದ ಚಿನ್ನಾಪುರದ ರಾಮಲಿಂಗ ದೇವಸ್ಥಾನದ ಚಿನ್ನೇಶ್ವರನಿಗೆ ಬೆಳ್ಳಿ ಕವಚವನ್ನು ಅರ್ಪಿಸಲಾಯಿತು .
ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ವಿಶ್ವೇಶ್ವರ ನಾರಾಯಣ ಹೆಗಡೆ ಕಣ್ಣಿಪಾಲ ಹಾಗೂ ಅವರ ಕುಟುಂಬದವರೆಲ್ಲರೂ ಸೇರಿ ಮಂಗಳವಾರ ಈ ಬೆಳ್ಳಿ ಕವಚ ದೇವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಹಿರಿಯ ವೈದಿಕರಾದ ಕೃಷ್ಣ ಭಟ್ಟ ಚಿಮ್ನಳ್ಳಿ, ರಾಮಚಂದ್ರ ಭಟ್ಟ ಕಬ್ಗಾಲ, ಚಿನ್ನಾ ಪುರ ಸೀಮಾ ಪರಿಷತ್ ಅಧ್ಯಕ್ಷ ದತ್ತಾತ್ರೇಯ ನಾ ಹೆಗಡೆ, ಚಿನ್ನಾ ಪುರ ಕಟ್ಟಡ ಸಮಿತಿ ಅಧ್ಯಕ್ಷ ಡಾ.ಜಿ ಪಿ ಭಟ್ಟ ಹೊನ್ನಗದ್ದೆ, ಉಮೇಶ ಭಾಗ್ವತ ಕಳಚೆ, ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
















Leave a Reply