ಯಲ್ಲಾಪುರ:
ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ನೋಟ್ ಬುಕ್ ಹಾಗೂ ಬ್ಯಾಗ್ ವಿತರಿಸುವ ಕಾರ್ಯಕ್ರಮ ಬುಧವಾರ ಯಶಸ್ವಿಯಾಗಿ ಜರುಗಿತು.
ಯಲ್ಲಾಪುರದ ಮುಂಡಗೋಡ ವಿಧಾನಸಭಾ ವ್ಯಾಪ್ತಿಯ ಸಾಮಾಜಿಕ ಮುಖಂಡ, ಸಮಾಜ ಸೇವಕ ಬಾಲಕೃಷ್ಣ ನಾಯಕ್ ಅವರ ನೇತೃತ್ವದಲ್ಲಿ ಈ ಜನಪದ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಉದ್ದೇಶದಿಂದ ಈ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಂದು ಮುಂಜಾನೆಯಿಂದಲೇ ಪಂಚಾಯತ್ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಸರಣಿ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 10:00 ಗಂಟೆಗೆ ಬೈಲಂದೂರುನ ಸರ್ಕಾರಿ ಶಾಲೆಯಲ್ಲಿ ನಂತರ 11:30ಕ್ಕೆ ಖಾರೇವಾಡ ಸರ್ಕಾರಿ ಶಾಲೆಯಲ್ಲಿ ಹಾಗೂ ಮಧ್ಯಾಹ್ನ 12:30ಕ್ಕೆ ಗಾವಠಾಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಕೃಷ್ಣ ನಾಯಕ್ ಅವರು, “ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಹೊಚ್ಚ ಹೊಸ ಬ್ಯಾಗ್ ಹಾಗೂ ಪುಸ್ತಕಗಳನ್ನು ಕೈಯಲ್ಲಿ ಹಿಡಿದ ಮಕ್ಕಳು ಮುಖದಲ್ಲಿ ಮಂದಹಾಸ ಕಂಡುಬಂತು.
ಈ ಸಂದರ್ಭದಲ್ಲಿ
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಟ್ಟು ಶೆಳಕೆ , ಪ್ರಮುಖರಾದ ವಿಠ್ಠಲ್ ಪಂಡಾರಮಿಸೆ , ಸೇಸಗೇರಿ
,ಅರ್ಜುನ್ ಬೆಂಗೇರಿ , ಸಂಜಯ್ ಶ್ರೀಕಾಂತ್ ಮೀರಾಶಿ
,ಪರಶುರಾಮ ತೀರಕಪ್ಪನವರ್ ಯಲವಳ್ಳಿ ಭಾಗದ ಲಕ್ಕು ಕೊಕರೇ , ಭರತ್ ಕೊಕ್ರೆ , ಕೇಶವ ಕಾಂಬಳೆ, ಮಂಜುನಾಥ್ ಕೊರ್ವರ್,
ಸೋನು ಜಂಗ್ಲೆ ,
ಬಮ್ಮು ಬಿಚ್ಚುಕ್ಲೆ
ಬಮ್ಮು ಪಟಕಾರೆ ಖಾರೆವಾಡ
ಮಾರೋತಿ ಕಾಣಪ್ಪನವರು,
ತುಕಾರಾಮ್ ಎಡಗೆ
,ಶಂಕರ್ ಕಾಂಬಳೆ
ಬಾಪು ತಾಟೆ ಯಲವಳ್ಳಿ
ಬಮ್ಮು ಬಿಚ್ಚುಕ್ಲೆ ಹಾಗೂ
ಬೈಲಂದೂರು ಗೌಳಿವಾಡಾ ಪ್ರಮುಖರಾದ ಸಾವು ಸೋನು ಕೊಕರೆ -SDMC ಅಧ್ಯಕ್ಷರು
ಸದಸ್ಯರು ಮತ್ತು
ಬೈಲಂದೂರ್ ಹಾಗೂ ಗೌಳಿವಾಡಾದ
ಬಾಪು ಥೋರತ್, ದಾಕ್ಲು ಕೊಕರೆ, ಬಾಗು ಜಾವು ಪಟಕಾರೆ, ಗಂಗಾರಾಮ ಕೊಕರೆ, ದೊಂಡು ತಾಟೆ,
ಬಾಬು ಥೋರತ್, ಮಾಲು ಪಟಕಾರೆ, ಜಾನು ಸೋನು ಕೊಕರೆ, ನಾನು ಠಕ್ಕು ಜೋರೆ,
ರಾಮು ಶ್ಯಾಮು ತಾಟೆ , ಸಹದೇವ ಪಾಟೀಲ್,
ರವಿ ಶಿಂಧೆ, ತುಕಾರಾಮ್ ಕೊಕರೆ ಮತ್ತು
ಖಾರೆವಾಡ ದ ಪ್ರಮುಖರಾದ
ಅಬ್ಬು ಪಾಂಡ್ರಮೀಸೆ,
ಜಾನು ಪಾಂಡ್ರಮೀಸೆ ,
ರಾಮು ಸೋನು ಪಾಂಡ್ರಮೀಸೆ ,
ರಾಮು ಬಾಬು ಪಾಂಡ್ರಮೀಸೆ ,
ಭಾಗು ಬಾಜಾರಿ ,
ಜನ್ನು ಕಾತ್ರೋಟ ,
ದೊಂಡು ಪಾಂಡ್ರಮೀಸೆ ,
ಪಾಂಡು ಲಾಂಬೋರ,
ಲಕ್ಕು ಪಾಂಡ್ರಮೀಸೆ ,
ವಸಂತ ಕೂಗಿನವರ್,
ಯಕ್ಕು ಕಾತ್ರೋಟ ,
ರೋಂಗು ಕಾತ್ರೋಟ,
ಗಾಂವಠಾಣ ಭಾಗದ ಪ್ರಮುಖರಾದ
ಬಾಬು ಶೇಂಡಗೆ -SDMC ಅಧ್ಯಕ್ಷರು
ಚಿಚ್ಚು ಎಡಗೆ ಸಾಮಾಜಿಕ ಕಾರ್ಯಕರ್ತ
ಧೂಳು ದೋಯಿಪೊಡೆ
ಜಾನು ಫಾಲೆ,
ಅಪ್ಪು ಫಾಲೆ ,
ದೇವು ಕಾಳೆ ಮುಂತಾದವರಿದ್ದರು.













Leave a Reply