Traffic ಫೈನ್ ರಿಯಾಯಿತಿಗೆ ಭರ್ಜರಿ ರೆಸ್ಪಾನ್ಸ್: ಕೇವಲ 14 ದಿನದಲ್ಲಿ 18 ಕೋಟಿ ರೂ. ದಂಡ ಸಂಗ್ರಹ!

ಹಂಚಿಕೊಳ್ಳಿ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೇಲಿನ ಶೇಕಡಾ 50ರಷ್ಟು ರಿಯಾಯಿತಿ (Traffic Fine Discount) ಯೋಜನೆಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನ್ 21 ರಿಂದ ಜುಲೈ 4ರವರೆಗೆ, ಅಂದರೆ ಕೇವಲ 14 ದಿನಗಳ ಅವಧಿಯಲ್ಲಿ ಒಟ್ಟು 18,15,42,200 ರೂ. ದಂಡದ ಹಣ ಪಾವತಿಯಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

6 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥ

ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿ, ಬಾಕಿ ಉಳಿಸಿಕೊಂಡಿದ್ದ ದಂಡವನ್ನು ಪಾವತಿಸಲು ಶೇ. 50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರಂತೆ ಜೂನ್ 21ರಿಂದ ಈ ಯೋಜನೆ ಜಾರಿಗೆ ಬಂದಿದ್ದು, ಸಾರ್ವಜನಿಕರು ಆನ್‌ಲೈನ್ ಮತ್ತು ಇತರ ಮಾಧ್ಯಮಗಳ ಮೂಲಕ ದಂಡ ಪಾವತಿಸುತ್ತಿದ್ದಾರೆ. ಜುಲೈ 4ರ ವರೆಗಿನ ಅವಧಿಯಲ್ಲಿ ಬರೋಬ್ಬರಿ 6,06,032 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಈ ಮೂಲಕ 18.15 ಕೋಟಿ ರೂ.ಗೂ ಅಧಿಕ ಮೊತ್ತ ಬೊಕ್ಕಸ ಸೇರಿದೆ ಎಂದು ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಜುಲೈ 10ರವರೆಗೆ ದಂಡ ಪಾವತಿಗೆ ಅವಕಾಶ

ವಾಹನ ಸವಾರರು ಈ ರಿಯಾಯಿತಿ ದರದಲ್ಲಿ ತಮ್ಮ ವಾಹನಗಳ ಮೇಲಿನ ಬಾಕಿ ದಂಡವನ್ನು ಪಾವತಿಸಲು ಜುಲೈ 10ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ದಂಡ ಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಪಿಎಸ್‌ಐ (PSI) ಒಳಗೊಂಡಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ, ವಾಹನ ಸವಾರರು ಮುಂದಿನ ದಿನಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಹಾಗೂ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಂಚಾರಿ ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

https://x.com/blrcitytraffic/status/2073452548233761197

Leave a Reply

Your email address will not be published. Required fields are marked *

Advertisement


This will close in 3 seconds