ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ

ಹಂಚಿಕೊಳ್ಳಿ

ಬೆಂಗಳೂರು: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ (DK Shivakumar) ಅವರು ಇಂದು ಬೆಂಗಳೂರಿನ ಲೋಕಭವನದಲ್ಲಿ ಅತ್ಯಂತ ಭಕ್ತಿ ಹಾಗೂ ಸಡಗರದಿಂದ ಪ್ರಮಾಣವಚನ ಸ್ವೀಕರಿಸಿದರು. ಕೈಯಲ್ಲಿ ಭಾರತದ ಸಂವಿಧಾನವನ್ನು ಹಿಡಿದುಕೊಂಡು, ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಅವರು ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ಐತಿಹಾಸಿಕ ಕ್ಷಣದಲ್ಲಿ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು ಹಾಗೂ ಬೆಂಬಲಿಗರು ಹರ್ಷೋದ್ಗಾರ ಮಾಡಿದರು.

ಪದಗ್ರಹಣ ಸಮಾರಂಭದ ಪ್ರಮುಖ ಹೈಲೈಟ್ಸ್:

ಸಾಂಪ್ರದಾಯಿಕ ಉಡುಗೆಯಲ್ಲಿ ಡಿಕೆಶಿ: ಈ ಮಹತ್ವದ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಅವರು ಅಪ್ಪಟ ದೇಸಿ ಶೈಲಿಯ ಶುಭ್ರ ರೇಷ್ಮೆ ಪಂಚೆ, ಜುಬ್ಬ ಹಾಗೂ ಕೊರಳಲ್ಲಿ ಶಲ್ಯ ಧರಿಸಿ ಆಗಮಿಸಿದ್ದರು. ಅವರ ಸಾಂಪ್ರದಾಯಿಕ ಉಡುಗೆ ನೆರೆದವರ ಗಮನ ಸೆಳೆಯಿತು.

ವೇದಿಕೆಯಲ್ಲಿ ದೀರ್ಘದಂಡ ನಮಸ್ಕಾರ: ಪ್ರಮಾಣವಚನ ಸ್ವೀಕರಿಸುವ ಮುನ್ನ ವೇದಿಕೆಗೆ ಆಗಮಿಸಿದ ಅವರು, ರಾಜ್ಯದ ಜನತೆ ಹಾಗೂ ತಾಯ್ನಾಡಿಗೆ ಗೌರವ ಸಮರ್ಪಿಸುವ ಸಂಕೇತವಾಗಿ ವೇದಿಕೆಯ ಮೇಲೆಯೇ ದೀರ್ಘದಂಡ ನಮಸ್ಕಾರ (ಸಾಷ್ಟಾಂಗ ನಮಸ್ಕಾರ) ಮಾಡಿದರು.

ಅಜ್ಜಯ್ಯನಿಗೆ ಪುಷ್ಪ ನಮನ: ಪ್ರಮಾಣವಚನ ಪ್ರಕ್ರಿಯೆ ಆರಂಭವಾಗುವ ಮುನ್ನ, ವೇದಿಕೆ ಮೇಲೆಯೇ ಇರಿಸಲಾಗಿದ್ದ ತಮ್ಮ ಆರಾಧ್ಯ ಗುರುಗಳಾದ ನೊಣವಿನಕೆರೆ ವೀರ ಗಂಗಾಧರ ಅಜ್ಜಯ್ಯನವರ ಭಾವಚಿತ್ರದ ಬಳಿ ತೆರಳಿ, ಭಕ್ತಿಭಾವದಿಂದ ಪುಷ್ಪ ನಮನ ಸಲ್ಲಿಸಿದರು.

ಸಂವಿಧಾನಕ್ಕೆ ಗೌರವ: ಒಂದು ಕೈಯಲ್ಲಿ ಭಾರತದ ಸಂವಿಧಾನದ ಪ್ರತಿಯನ್ನು ಎತ್ತಿಹಿಡಿದುಕೊಂಡು, ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಓದುವ ಮೂಲಕ ಸಾಂವಿಧಾನಿಕ ಮೌಲ್ಯಗಳು ಹಾಗೂ ಧಾರ್ಮಿಕ ನಂಬಿಕೆಗಳೆರಡಕ್ಕೂ ಸಮಾನ ಗೌರವ ಸಲ್ಲಿಸಿದರು.

Leave a Reply

Your email address will not be published. Required fields are marked *

Advertisement


This will close in 3 seconds