ಹಗತಿಗಳ ಚಲನೆ ಹಾಗೂ ಗಣೇಶನ ಕೃಪೆ ನಿಮ್ಮ ಇಂದಿನ ದಿನವನ್ನು ಹೇಗೆ ರೂಪಿಸಲಿದೆ? ಕೆಲವರಿಗೆ ಇಂದು ವೃತ್ತಿ ಜೀವನದಲ್ಲಿ ಅನಿರೀಕ್ಷಿತ ಯಶಸ್ಸು ಸಿಕ್ಕರೆ, ಮತ್ತೂ ಕೆಲವರಿಗೆ ತಾಳ್ಮೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ನಿಮ್ಮ ರಾಶಿಯ ಇಂದಿನ ಫಲ ಇಲ್ಲಿದೆ ನೋಡಿ.
ಮೇಷ ರಾಶಿ (Aries)
ಇಂದು ನಿಮ್ಮಲ್ಲಿ ಮಹತ್ವಾಕಾಂಕ್ಷೆ ಹೆಚ್ಚಿರಲಿದೆ. ನೀವು ಪ್ರತಿಯೊಂದು ಕೆಲಸವನ್ನು ಅತ್ಯಂತ ನಿಖರವಾಗಿ ಯೋಜನೆ ರೂಪಿಸಿ, ಅಚ್ಚುಕಟ್ಟಾಗಿ ನಿರ್ವಹಿಸುತ್ತೀರಿ. ಆದರೆ, ನಿಮ್ಮ ಪ್ರಗತಿಯ ವೇಗ ಮಾತ್ರ ಕತ್ತೆಜ್ಜೆಯಂತೆ ಅತ್ಯಂತ ನಿಧಾನವಾಗಿರಲಿದೆ. ಹಾಗಂತ ಬೇಸರ ಮಾಡಿಕೊಳ್ಳಬೇಡಿ, ಗಣೇಶನ ಆಶೀರ್ವಾದ ನಿಮ್ಮ ಮೇಲಿದೆ.
ವೃಷಭ ರಾಶಿ (Taurus)
ನಿಮ್ಮ ವೃತ್ತಿ ಜೀವನದಲ್ಲಿ ಇಂದು ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ಆದರೆ, ಈ ಪ್ರಗತಿಯು ನೀವು ನಿರೀಕ್ಷಿಸದ ಬೇರೆದೇ ದಿಕ್ಕಿನಲ್ಲಿ ಇರುವ ಸಾಧ್ಯತೆ ಇದೆ. ಆರ್ಥಿಕ ಯಶಸ್ಸು ಮತ್ತು ಹೊಸ ಅವಕಾಶಗಳು ಏಕಕಾಲಕ್ಕೆ ನಿಮ್ಮ ಮನೆ ಬಾಗಿಲು ತಟ್ಟಲಿವೆ. ಭೌತಿಕವಾಗಿಯೂ ನೀವು ಉತ್ತಮ ಪ್ರಗತಿ ಕಾಣಲಿದ್ದೀರಿ.
ಮಿಥುನ ರಾಶಿ (Gemini)
ಇಂದು ನೀವು ಇತರ ಜನರ ನಡವಳಿಕೆ ಹಾಗೂ ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಆರ್ಥಿಕ ಭದ್ರತೆ ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸುವ ಸಾಧ್ಯತೆ ಇದೆ. ನಿಮ್ಮ ಕಾಳಜಿವಹಿಸುವ ಸ್ವಭಾವದಿಂದಾಗಿ ಜನರ ಪ್ರೀತಿ ಮತ್ತು ಮೆಚ್ಚುಗೆಗೆ ಪಾತ್ರರಾಗುತ್ತೀರಿ.
ಕಟಕ ರಾಶಿ (Cancer)
ಇಂದು ನಿಮ್ಮ ಪ್ರೀತಿಪಾತ್ರರ ಕಡೆಗೆ ನೀವು ವಿಶೇಷ ಗಮನ ಹರಿಸುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಇದು ಅತ್ಯಂತ ಸೂಕ್ತವಾದ ಸಮಯ. ಸಾಮಾನ್ಯವಾಗಿ ನೀವು ಬುದ್ಧಿಗಿಂತ ಹೃದಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡದಿದ್ದರೂ, ಇಂದು ಹೆಂಡತಿಯ ಎದುರು ಕೊಂಚ ಭಾವುಕರಾಗಲಿದ್ದೀರಿ. ವಿವಿಧ ಭಾವನೆಗಳ ಸಮ್ಮಿಶ್ರಣವನ್ನು ಇಂದು ಅನುಭವಿಸುವಿರಿ.
ಸಿಂಹ ರಾಶಿ (Leo)
ಇಂದಿನ ದಿನ ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಒಂದು ಕಡೆ ನಿಮ್ಮ ಸಂಗಾತಿ ಅಥವಾ ಬಿಸಿನೆಸ್ ಪಾರ್ಟ್ನರ್ನ ನಡವಳಿಕೆಯಿಂದ ನಿಮಗೆ ಅಸಮಾಧಾನ ಉಂಟಾದರೆ, ಮತ್ತೊಂದೆಡೆ ಹೂಡಿಕೆ ಅಥವಾ ಸಟ್ಟಾ ವ್ಯವಹಾರಗಳಿಂದ ಅದ್ಭುತ ಲಾಭವನ್ನು ಗಳಿಸಲಿದ್ದೀರಿ. ಆಪ್ತ ಸ್ನೇಹಿತನೊಬ್ಬನ ಸಲಹೆಯಿಂದಾಗಿ ದಿನದ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಕನ್ಯಾ ರಾಶಿ (Virgo)
ಇಂದು ನಿಮ್ಮ ಹಣೆಬರಹವನ್ನು ನಿಮ್ಮ ಕೈಯಾರೆ ನೀವೇ ರೂಪಿಸಿಕೊಳ್ಳಲಿದ್ದೀರಿ. ಜನರ ಮುಖವಾಡದ ಹಿಂದಿರುವ ನಿಜವಾದ ಮುಖವನ್ನು ಗುರುತಿಸುವ ವಿಶೇಷ ದೃಷ್ಟಿಕೋನ ಇಂದು ನಿಮಗಿರಲಿದೆ. ಯಾರೊಂದಿಗೆ ಸಮಯ ಕಳೆಯಬೇಕು ಎಂಬುದನ್ನು ನೀವೇ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತೀರಿ. ನಿಮ್ಮ ಆಲೋಚನೆಗಳಿಗೆ ಒಪ್ಪಿಗೆ ಪಡೆಯಲು ಇಂದು ಪ್ರೆಸೆಂಟೇಶನ್ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕಾಗಬಹುದು ಮತ್ತು ಕೊಂಚ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.
ತುಲಾ ರಾಶಿ (Libra)
ಸರ್ಕಾರಿ ಕೆಲಸಗಳಿಗೆ ಇಂದು ಅತ್ಯಂತ ಸುವರ್ಣ ದಿನವಾಗಿದೆ. ವಿಶೇಷವಾಗಿ ಸರ್ಕಾರಿ ನೌಕರರಿಗೆ ತಮ್ಮ ಕಠಿಣ ಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶಗಳು ಸಿಗಲಿವೆ. ನಿಮ್ಮ ಕಾರ್ಯಕ್ಷಮತೆ ಮತ್ತು ದಕ್ಷತೆಗೆ ಪ್ರಶಂಸೆ ಹಾಗೂ ಸೂಕ್ತ ಪ್ರತಿಫಲ ದೊರೆಯಲಿದೆ. ಪ್ರೀತಿಪಾತ್ರರ ಜೊತೆ ಮುಕ್ತವಾಗಿ ಮನದಾಳದ ಮಾತುಗಳನ್ನು ಆಡಲಿದ್ದೀರಿ. ಗಣೇಶನ ಪೂರ್ಣ ಆಶೀರ್ವಾದ ನಿಮಗಿದೆ.
ವೃಶ್ಚಿಕ ರಾಶಿ (Scorpio)
ನಿಮ್ಮ ಮನಸ್ಸಿನಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ಮೊದಲು ಹೊರಹಾಕಿ. ನಿಮ್ಮ ತಂಡದೊಂದಿಗೆ ಉತ್ಸಾಹದಿಂದ ಕೆಲಸ ಮಾಡಲು ಮತ್ತು ಸಹೋದ್ಯೋಗಿಗಳಿಗೆ ಸಮಾನ ಜವಾಬ್ದಾರಿಗಳನ್ನು ಹಂಚಲು ನೀವು ಸಕಾರಾತ್ಮಕವಾಗಿರಬೇಕು. ಇತರರ ಸಾಮರ್ಥ್ಯವನ್ನು ಅರಿತು ಕೆಲಸ ನಿಯೋಜಿಸಿ. ಅವರ ಕೆಲಸವನ್ನು ನಂಬಿ ಮುನ್ನಡೆಯಿರಿ, ಎಲ್ಲವೂ ಸುಸೂತ್ರವಾಗಿ ನಡೆಯಲಿದೆ.
ಧನು ರಾಶಿ (Sagittarius)
ಇಂದಿನ ಬೆಳಗ್ಗೆ ನಿಮಗೆ ಕೊಂಚ ಆಲಸ್ಯದಿಂದ ಆರಂಭವಾಗಬಹುದು, ನಿಮ್ಮ ಶಕ್ತಿ ಸಂಪೂರ್ಣ ಶೂನ್ಯವಾದಂತೆ ಭಾಸವಾಗಲಿದೆ. ಹೀಗಾಗಿ, ನಿಮ್ಮ ಕೆಲಸದ ಜವಾಬ್ದಾರಿಗಳನ್ನು ಸಹೋದ್ಯೋಗಿಗಳಿಗೆ ಹಂಚಲು ನೀವು ಪ್ರಯತ್ನಿಸಬಹುದು. ಆದರೆ, ಜವಾಬ್ದಾರಿಯನ್ನು ಸರಿಯಾದ ವ್ಯಕ್ತಿಗೇ ವಹಿಸುತ್ತಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ನಂತರ ಪಶ್ಚಾತ್ತಾಪ ಪಡಬೇಕಾಗಬಹುದು.
ಮಕರ ರಾಶಿ (Capricorn)
ನಿಮ್ಮ ವ್ಯಾಪಾರ ಅಥವಾ ವ್ಯವಹಾರವನ್ನು ವಿಸ್ತರಿಸಲು ನೀವು ಬಯಸುತ್ತೀರಿ. ಆದರೆ, ಅದಕ್ಕಾಗಿ ಯಾವ ಹಾದಿ ಹಿಡಿಯಬೇಕು ಎಂಬ ಗೊಂದಲ ನಿಮ್ಮನ್ನು ಕಾಡಲಿದೆ. ಆಕಾಶದ ಎತ್ತರಕ್ಕೆ ಬೆಳೆಯಬೇಕೆಂಬ ನಿಮ್ಮ ಆಸೆಗೆ ಈ ದ್ವಂದ್ವ ನಿಲುವು ಅಡ್ಡಿಯಾಗಬಹುದು. ನಿಮ್ಮ ಮನಸ್ಸು (ಹೃದಯ) ಏನು ಹೇಳುತ್ತದೋ ಅದನ್ನು ಕೇಳಿ, ಅದು ನಿಮಗೆ ಸರಿಯಾದ ದಾರಿಯನ್ನು ತೋರಿಸುತ್ತದೆ.
ಕುಂಭ ರಾಶಿ (Aquarius)
ನಿಮ್ಮ ದಿನನಿತ್ಯದ ಬದುಕಿನ ಬೇಸರ ಅಥವಾ ಏಕತಾನತೆಯನ್ನು ನಿಮ್ಮ ಹಾಸ್ಯಪ್ರಜ್ಞೆ ಮತ್ತು ಚತುರತೆಯಿಂದ ಬಣ್ಣಮಯವಾಗಿಸಿಕೊಳ್ಳಲಿದ್ದೀರಿ. ನಿಮ್ಮ ಸಂತೋಷದಾಯಕ ಸ್ವಭಾವವು ನಿಮ್ಮ ಸುತ್ತಲಿನವರ ಕೆಲಸದ ಹೊರೆಯನ್ನು ಹಗುರಗೊಳಿಸಲಿದೆ. ಜನರು ನಿಮ್ಮ ಒಡನಾಟವನ್ನು ಬಯಸುತ್ತಾರೆ, ಇದೇ ಕಾರಣಕ್ಕೆ ಇಂದು ನೀವು ಎಲ್ಲರ ಆಮಂತ್ರಣ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತೀರಿ.
ಮೀನ ರಾಶಿ (Pisces)
ಇಂದು ನೀವು ಮಿಶ್ರ ಭಾವನೆಗಳನ್ನು ಅನುಭವಿಸುವಿರಿ. ಒಂದು ಕಡೆ ಹದಗೆಡುತ್ತಿರುವ ಪರಿಸ್ಥಿತಿಯನ್ನು ಹೇಗೆ ಸರಿಪಡಿಸುವುದು ಎಂಬ ಆತಂಕ ಮತ್ತು ಒತ್ತಡ ನಿಮ್ಮನ್ನು ಕಾಡಿದರೆ, ಮತ್ತೊಂದೆಡೆ ವಿಷಯಗಳನ್ನು ಅವುಗಳಿದ್ದಂತೆಯೇ ಸ್ವೀಕರಿಸುವ ಮನಸ್ಥಿತಿಯಲ್ಲಿ ನೀವಿರುತ್ತೀರಿ. ಇಂದು ನೀವು ಕಲಿಯುವ ಪಾಠಗಳು ನಿಮ್ಮ ಭವಿಷ್ಯದ ಬೆಳವಣಿಗೆಗೆ ಮತ್ತು ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಲು ಪ್ರಮುಖ ಪಾತ್ರ ವಹಿಸಲಿವೆ.

Leave a Reply