ಬಾಲಿವುಡ್ನ ಬಹುನಿರೀಕ್ಷಿತ ಹಾರರ್ ಫ್ಯಾಂಟಸಿ ಹಾಗೂ ಜಾನಪದ ಶೈಲಿಯ ಚಿತ್ರ ‘ತುಂಬಾಡ್ 2’ (Tumbbad 2) ಬಳಗಕ್ಕೆ ಇದೀಗ ಜನಪ್ರಿಯ ನಟಿ ಆಲಿಯಾ ಭಟ್ (Alia Bhatt) ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ.
ನಟ ಹಾಗೂ ನಿರ್ಮಾಪಕ ಸೋಹಮ್ ಶಾ (Sohum Shah) ಮತ್ತು ಪೆನ್ ಸ್ಟುಡಿಯೋಸ್ನ (PEN Studios) ಡಾ. ಜಯಂತಿಲಾಲ್ ಗಡಾ ಅವರು ಆಲಿಯಾ ಭಟ್ ಅವರನ್ನು ‘ತುಂಬಾಡ್ 2’ ರೋಚಕ ಜಗತ್ತಿಗೆ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ಜಾನಪದ ಕಥೆಯಾಧಾರಿತ ಈ ಬೃಹತ್ ಫ್ರಾಂಚೈಸಿಗೆ ಆದೇಶ್ ಪ್ರಸಾದ್ (Adesh Prasad) ಅವರು ನಿರ್ದೇಶನ ಮಾಡುತ್ತಿದ್ದಾರೆ. ಸೋಹಮ್ ಶಾ ಫಿಲ್ಮ್ಸ್ ಹಾಗೂ ಪೆನ್ ಸ್ಟುಡಿಯೋಸ್ ಸಂಸ್ಥೆಯು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಭಾರತೀಯ ಸಿನಿಮಾರಂಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಗೂ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದ್ದ ತುಂಬಾಡ್ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ, 2027ರ ಡಿಸೆಂಬರ್ 3ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

Leave a Reply