Bengaluru ನಗರಾಭಿವೃದ್ಧಿ ಸಚಿವರು ಗಮನಿಸಬೇಕಾದ ಸುದ್ದಿ: ಪಾಲಿಕೆಯಲ್ಲಿ Non-KAS ಅಧಿಕಾರಿ ಪಲ್ಲವಿ ದರ್ಬಾರ್!

ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಕಡ್ಡಾಯವಾಗಿ ಗಮನಿಸಬೇಕಾದ ಆಡಳಿತಾತ್ಮಕ ಕರ್ಮಕಾಂಡವೊಂದು ಇದೀಗ ಬಯಲಾಗಿದೆ. ಪಾಲಿಕೆಯಲ್ಲಿ (GBA) ನಾನ್-ಕೆಎಎಸ್ (Non-KAS) ಅಧಿಕಾರಿಯೊಬ್ಬರು ವರ್ಗಾವಣೆ ನಿಯಮಗಳನ್ನು ಗಾಳಿಗೆ ತೂರಿ ಕಳೆದ ಒಂದು ದಶಕದಿಂದ ದರ್ಬಾರ್ ನಡೆಸುತ್ತಿರುವುದು ತೀವ್ರ ಆಕ್ರೋಶಕ್ಕೆ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪಲ್ಲವಿ ಎಂಬ ನಾನ್-ಕೆಎಎಸ್ ಅಧಿಕಾರಿಯೇ ಈ ಎಲ್ಲ ಅಕ್ರಮಗಳ ಕೇಂದ್ರಬಿಂದು. ಇವರು ತಮ್ಮ ಆಡಳಿತಾತ್ಮಕ ಹಾಗೂ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ನಿರಂತರವಾಗಿ ಪಾಲಿಕೆಯಲ್ಲಿಯೇ ಆಯಕಟ್ಟಿನ ಹುದ್ದೆಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕೆಎಎಸ್ (KAS) ಅಧಿಕಾರಿಗಳು ಅಲಂಕರಿಸಬೇಕಾದ ಉನ್ನತ ಹುದ್ದೆಗಳಲ್ಲಿ ಯಾವುದೇ ಅರ್ಹತೆಯಿಲ್ಲದಿದ್ದರೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪೂರ್ವ ವಲಯ, ದಾಸರಹಳ್ಳಿ ವಲಯ, ಉತ್ತರ ವಲಯದಂತಹ ಪ್ರಮುಖ ವಿಭಾಗಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಉಪ ಆಯುಕ್ತರು ಹಾಗೂ ಕೌನ್ಸಿಲ್ ಕಾರ್ಯದರ್ಶಿಯಂತಹ ಮಹತ್ವದ ಹುದ್ದೆಗಳಲ್ಲೂ ಇವರು ತಮ್ಮ ಪ್ರಭಾವ ಬೀರಿದ್ದಾರೆ.

ಸರ್ಕಾರಿ ಅಧಿಕಾರಿಗಳಿಗೆ ಕಡ್ಡಾಯವಾಗಿ ಅನ್ವಯವಾಗುವ ಸಾಮಾನ್ಯ ವರ್ಗಾವಣೆ ನಿಯಮಗಳು ಈ ಮಹಿಳಾ ಅಧಿಕಾರಿಗೆ ಮಾತ್ರ ಅನ್ವಯವಾಗುವುದಿಲ್ಲವೇ ಎಂಬ ಗಂಭೀರ ಪ್ರಶ್ನೆ ಇದೀಗ ಮೂಡಿದೆ. ಪಾಲಿಕೆಯಿಂದ ಬೇರೆ ಕಡೆಗೆ ವರ್ಗಾವಣೆಯಾದರೂ, ಮತ್ತೆ ಪ್ರಭಾವ ಬಳಸಿ ಮರಳಿ ಅದೇ ಪಾಲಿಕೆಗೆ ಎಂಟ್ರಿ ಕೊಡುತ್ತಿರುವುದು ನಿರಂತರವಾಗಿ ಸಾಗಿದೆ. ನಾನ್-ಕೆಎಎಸ್ ಅಧಿಕಾರಿಯೊಬ್ಬರು ಯಾವುದೇ ನಿಯಮಗಳಿಗೆ ಜಗ್ಗದೆ ಪಾಲಿಕೆಯಲ್ಲಿಯೇ ದಶಕಗಳ ಕಾಲ ಬೀಡುಬಿಟ್ಟಿರುವ ಹಿಂದಿನ ರಹಸ್ಯವೇನು ಮತ್ತು ಇದರ ಹಿಂದೆ ಇರುವ ಕಾಣದ ಕೈಗಳು ಯಾರವು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕಿದೆ.

Leave a Reply

Your email address will not be published. Required fields are marked *