ಕನ್ನಡಿಗರ ಹೆಮ್ಮೆಯ ವಾಹಿನಿ ‘ಕಲರ್ಸ್ ಕನ್ನಡ’ದ ಬಿಗ್ ಬಾಸ್ ನೂತನ ಸೀಸನ್ನ ಆಡಿಷನ್ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ರಾಜ್ಯಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಡಿಜಿಟಲ್ ಜಗತ್ತಿನ ಕಣ್ಮಣಿಗಳಾದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಬಿಗ್ ಬಾಸ್ ಮನೆಗೆ ಬರಲು ಭಾರಿ ಉತ್ಸಾಹ ತೋರುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈಗಾಗಲೇ ನೂರಾರು ಇನ್ಫ್ಲುಯೆನ್ಸರ್ಗಳು ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಕಲರ್ಸ್ ಕನ್ನಡವನ್ನು ಟ್ಯಾಗ್ ಮಾಡುತ್ತಿದ್ದಾರೆ.
ಆದರೆ, ಕೇವಲ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಟ್ಯಾಗ್ ಮಾಡಿದರೆ ಬಿಗ್ ಬಾಸ್ ಟೀಮ್ ನಿಮ್ಮನ್ನು ಸೆಲೆಕ್ಟ್ ಮಾಡುತ್ತಾ? ಖಂಡಿತ ಇಲ್ಲ! ಈ ಸುವರ್ಣಾವಕಾಶ ನಿಮ್ಮ ಕೈತಪ್ಪಬಾರದು ಎಂದರೆ ನೀವು ಆಡಿಷನ್ ಪ್ರಕ್ರಿಯೆಯನ್ನು ಅಧಿಕೃತ ಚಾನೆಲ್ ಮೂಲಕವೇ ಪೂರ್ಣಗೊಳಿಸಬೇಕು. ಆ ಕುರಿತು ಕಲರ್ಸ್ ಕನ್ನಡ ವಾಹಿನಿ ನೀಡಿರುವ ಮಹತ್ವದ ಅಲರ್ಟ್ ಇಲ್ಲಿದೆ.
ಇನ್ಸ್ಟಾಗ್ರಾಮ್ನಲ್ಲಿ ಕೇವಲ ಟ್ಯಾಗ್ ಮಾಡುವುದರಿಂದ ನಿಮ್ಮ ಅಪ್ಲಿಕೇಶನ್ ಪರಿಶೀಲನೆಗೆ ಒಳಪಡುವುದಿಲ್ಲ. ನಿಮ್ಮ ವಿಡಿಯೋಗಳು ಮತ್ತು ವಿವರಗಳು ನೇರವಾಗಿ ಬಿಗ್ ಬಾಸ್ ಸೆಲೆಕ್ಷನ್ ಕಮಿಟಿಗೆ ತಲುಪಬೇಕಾದರೆ ನೀವು ಅಧಿಕೃತ ವೆಬ್ಸೈಟ್ ಮೂಲಕವೇ ಅಪ್ಲೈ ಮಾಡಬೇಕು. ಕಲರ್ಸ್ ಕನ್ನಡ ಪ್ರಕಟಿಸಿರುವ ಅಧಿಕೃತ ಲಿಂಕ್ ಮಾತ್ರ ಇದಕ್ಕೆ ಏಕೈಕ ಮಾರ್ಗವಾಗಿದೆ.
ಅಧಿಕೃತ ಆಡಿಷನ್ ಲಿಂಕ್: colorskannada.jiostar.com
ಇದೇ ವೇಳೆ ಬಿಗ್ ಬಾಸ್ ಆಸ್ಪಿರೆಂಟ್ಸ್ಗೆ ವಾಹಿನಿ ಒಂದು ಮಹತ್ವದ ಎಚ್ಚರಿಕೆಯನ್ನೂ ನೀಡಿದೆ. ಬಿಗ್ ಬಾಸ್ ಆಡಿಷನ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆಡಿಷನ್ ವಿಡಿಯೋ ಮಾಡಲು, ಪ್ರವೇಶ ನೀಡಲು ಅಥವಾ ನಿಮ್ಮನ್ನು ಶೋಗೆ ಆಯ್ಕೆ ಮಾಡಲು ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಹಣವನ್ನು ಕೇಳಿದರೆ ದಯವಿಟ್ಟು ನಂಬಬೇಡಿ. ವಂಚಕರ ಜಾಲಕ್ಕೆ ಬಲಿಯಾಗಬೇಡಿ ಎಂದು ವಾಹಿನಿ ಕಟ್ಟುನಿಟ್ಟಾಗಿ ಮನವಿ ಮಾಡಿದೆ.
ನಿಮ್ಮಲ್ಲಿರುವ ಅಪ್ಪಟ ಪ್ರತಿಭೆ, ನಿಮ್ಮ ಜೀವನದ ಕಥೆ ಮತ್ತು ನಿಮ್ಮ ನೈಜ ವ್ಯಕ್ತಿತ್ವವನ್ನು ಇಡೀ ಜಗತ್ತಿಗೆ ತೋರಿಸಲು ಇದುವೇ ಸಕಾಲ. ತಡ ಮಾಡಬೇಡಿ, ತಕ್ಷಣವೇ ಅಧಿಕೃತ ಲಿಂಕ್ಗೆ ಭೇಟಿ ನೀಡಿ ನಿಮ್ಮ ಅತ್ಯುತ್ತಮ ಆಡಿಷನ್ ವಿಡಿಯೋ ಅಪ್ಲೋಡ್ ಮಾಡಿ. ಯಾಕಂದ್ರೆ, ಬಿಗ್ ಬಾಸ್ ಮನೆ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ!

Leave a Reply