ಯಲ್ಲಾಪುರ:
ಯಕ್ಷಮಿತ್ರರು ಯಲ್ಲಾಪುರ ಇವರ ಸಂಯೋಜನೆಯಲ್ಲಿ 11 ನೇ ವರ್ಷದ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಪಟ್ಟಣದ ಕಾರ್ಮಿಕ ಭವನದಲ್ಲಿ ಸೆ.5 ರಂದು ಸಂಜೆ 6 ರಿಂದ ನಡೆಯಲಿದೆ ಎಂದು ಸಂಘಟಕ ಸುಬ್ಬಣ್ಣ ಕಂಚಗಲ್ ತಿಳಿಸಿದ್ದಾರೆ.
ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ರುಕ್ಮಾಂಗದ ಮೋಹಿನಿ ಹಾಗೂ ಮೂಲಕಾಸುರ ವಧೆ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮಕ್ಕಾಗಿ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ ಎಂದರು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರಿ ಜನ್ಸಾಲೆ, ಶಂಕರ ಭಟ್ಟ ಬ್ರಹ್ಮೂರು, ಪ್ರಸನ್ನ ಭಟ್ಟ ಬಾಳ್ಕಲ್, ಅನಂತ ಹೆಗಡೆ ದಂತಳಿಗೆ, ಗಣೇಶ ಆಚಾರಿ ಬಿಲ್ಲಾಡಿ, ದರ್ಶನ ಗೌಡ, ಮದ್ದಲೆವಾದಕರಾಗಿ ಎ.ಪಿ ಪಾಠಕ, ಎನ್.ಜಿ ಹೆಗಡೆ, ಶಶಾಂಕ ಆಚಾರಿ, ಚಂಡೆವಾದಕರಾಗಿ ಗಣೇಶ ಗಾಂವ್ಕರ ಕನಕನಹಳ್ಳಿ, ಪ್ರಸನ್ನ ಭಟ್ಟ ಹೆಗ್ಗಾರ, ಪ್ರಜ್ವಲ್ ಮುಂಡಾಡಿ ಭಾಗವಹಿಸಲಿದ್ದಾರೆ.
ಮುಮ್ಮೇಳದಲ್ಲಿ ವಿದ್ಯಾಧರ ಜಲವಳ್ಳಿ, ನೀಲ್ಕೋಡ ಶಂಕರ ಹೆಗಡೆ, ಪ್ರಸನ್ನ ಶೆಟ್ಟಿಗಾರ, ಗಣೇಶ ಕನ್ನಡಿಕಟ್ಟೆ, ನರಸಿಂಹ ಚಿಟ್ಟಾಣಿ, ವಿಶ್ವನಾಥ ಆಚಾರಿ ತೊಂಬಟ್ಟು, ಭಾಸ್ಕರ ಗಾಂವ್ಕರ ಬಿದ್ರೆಮನೆ, ಉದಯ ಕಡಬಾಳ, ವಿಶ್ವನಾಥ ಹೆನ್ನಾಬೈಲ, ಸಂಜಯ ಬಿಳಿಯೂರು, ಸದಾಶಿವ ಮಲವಳ್ಳಿ, ಸನ್ಮಯ ಭಟ್ಟ, ಶಿವರಾಮ ಭಾಗ್ವತ, ಕೆ.ಜಿ ಕಾರ್ತಿಕ, ಮಂಜುನಾಥ ಹೆಗಡೆ ಹಿಲ್ಲೂರು, ದತ್ತಾತ್ರೇಯ ಮರಾಠೆ, ಭಾಸ್ಕರ ಮರಾಠೆ, ಆತ್ರೇಯ ಗಾಂವ್ಕರ, ಸ್ತ್ರೀ ಪಾತ್ರದಲ್ಲಿ ಶಶಿಕಾಂತ ಶೆಟ್ಟಿ ಕಾರ್ಕಳ, ಸುಧೀರ ಉಪ್ಪೂರು, ನಾಗರಾಜ ಕುಂಕಿಪಾಲ, ಸಂತೋಷ ಕುಲಾಲ, ಪುರುಷೋತ್ತಮ ಸಾಗರ, ಹಾಸ್ಯಪಾತ್ರದಲ್ಲಿ ರವೀಂದ್ರ ದೇವಾಡಿಗ, ಪುರಂದರ ಮೂಡ್ಕಣಿ ಭಾಗವಹಿಸುವರು ಎಂದು ವಿವರಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ನಾರಾಯಣ ಭಟ್ಟ ಮಲವಳ್ಳಿ, ಎಂ.ಎನ್.ಹೆಗಡೆ ಹಳವಳ್ಳಿ, ಸತೀಶ ಯಲ್ಲಾಪುರ ಅವರನ್ನು ಸನ್ಮಾನಿಸಲಾಗುವುದೆಂದು ತಿಳಿಸಿದ ಅವರು, ಯಲ್ಲಾಪುರದ ಯಕ್ಷಮಿತ್ರರು, ಕಲಾಸಕ್ತರು, ಕಲಾಭಿಮಾನಿಗಳ ಸಹಕಾರದಿಂದ ಶ್ರಾವಣ ಯಕ್ಷ ಸಂಭ್ರಮ ಜಿಲ್ಲಾದ್ಯಂತ ಹೆಸರು ಮಾಡಿದೆ. ಈ ಬಾರಿಯೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿಸಿದರು.
ನಾಳೆ 11 ನೇ ಶ್ರಾವಣ ಯಕ್ಷ ಸಂಭ್ರಮ: ಸುಬ್ಬಣ್ಣ ಕಂಚಗಲ್















Leave a Reply