ಬ್ರೇಕ್‌ಗೆ ರಜೆ, ವೇಗಕ್ಕೆ ಡ್ಯೂಟಿ: ಮಹಾಸತಿ ಸರ್ಕಲ್‌ನಲ್ಲಿ ಕಾರು–ಬೈಕ್ ಡಿಕ್ಕಿ!

ಹಂಚಿಕೊಳ್ಳಿ

ಶಿರಸಿ: ನಗರದ ಮಹಾಸತಿ ಸರ್ಕಲ್ ಸಮೀಪ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕ ಗಾಯಗೊಂಡಿದ್ದಾನೆ.
ಚಿಪಗಿ ಗ್ರಾಮದ ಮೇಲಿನ ಎಸಳೆಯ ಗುಡದಯ್ಯ ಬೀರಪ್ಪ ಕರ್ಜಗಿ (23) ಗಾಯಾಳು. ಬೈಕ್ ಸವಾರ ಮಹಾಸತಿ ಸರ್ಕಲ್ ಮಾರ್ಗವಾಗಿ ಯಲ್ಲಾಪುರ ನಾಕಾ ಕಡೆಗೆ ತೆರಳುತ್ತಿದ್ದ ವೇಳೆ ಶಿರಸಿ-ಯಲ್ಲಾಪುರ ರಾಜ್ಯ ರಸ್ತೆಯ ಮಹಾಸತಿ ಸರ್ಕಲ್ ಸಮೀಪ ಎಪಿಎಂಸಿ ಕಡೆಯಿಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅಪಘಾತಕ್ಕೆ ಕಾರಣನಾದ ಖುರ್ಸೆ ಕಂಪೌಂಡ್ ನಿವಾಸಿ ಶಿವಾಜಿ ಕೃಷ್ಣಪ್ಪ ಮಡಿವಾಳ (43) ವಿರುದ್ಧ ಶಿರಸಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *