
ಯಲ್ಲಾಪುರ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಹುಬ್ಬಳ್ಳಿ ವಿಭಾಗದ ಉಪಾಧ್ಯಕ್ಷರಾದ ಸುನೀಲ್ ಹನಮಣ್ಣವರ ಅವರು ಮಂಗಳವಾರ (ಆಗಸ್ಟ್ 18) ಯಲ್ಲಾಪುರ ತಾಲೂಕಿನ ಬಸ್ ನಿಲ್ದಾಣ ಹಾಗೂ ಬಸ್ ಡಿಪೋಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಿಡ ನೆಡುವ ಮೂಲಕ ಪರಿಸರ ಜಾಗೃತಿ:
ಭೇಟಿಯ ಅಂಗವಾಗಿ ಡಿಪೋ ಆವರಣದಲ್ಲಿ ಗಿಡ ನೆಡುವ ಮೂಲಕ ಸಸ್ಯಶ್ಯಾಮಲ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷರು, ತಾಲೂಕಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿರುವುದಕ್ಕೆ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ದೇವಿದಾಸ (ಉಲ್ಲಾಸ) ನಾಗೇಶ್ ಶಾನಭಾಗ, ಸಮಿತಿಯ ಪ್ರಮುಖ ಸದಸ್ಯರಾದ ಟಿ. ಸಿ. ಗಾಂವ್ಕರ್, ಮಹೇಶ್ ನಾಯ್ಕ್, ಅನಿಲ್ ಮರಾಠೆ, ಮುಷರತ್ ಖಾನ್ ಹಾಗೂ ಎಂ. ಕೆ. ಭಟ್ ಅವರು ಹಾಜರಿದ್ದು, ಯೋಜನೆಗಳ ಪ್ರಗತಿ ಕುರಿತು ಚರ್ಚಿಸಿದರು.













Leave a Reply