ಶಿರಸಿ: “ಅಧಿಕಾರ ಎಂದರೆ ಸಾರ್ವಜನಿಕರನ್ನು ಹೆದರಿಸಿ ಮಣಿಸುವುದಲ್ಲ. ಜನರ ಸಂಕಷ್ಟಗಳಿಗೆ ಕಿವಿಯಾಗಿ, ಮಾನವೀಯತೆಯಿಂದ ಪರಿಹಾರ ಒದಗಿಸುವುದು,” ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೇರ ಹಾಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ನಗರದ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅತಿವೃಷ್ಠಿ ಹಾಗೂ ಅನಾವೃಷ್ಠಿ ಪರಿಸ್ಥಿತಿಯ ಪ್ರಮುಖ ಪರಿಶೀಲನಾ ಸಭೆಯಲ್ಲಿ ಶಾಸಕರು ಅಧಿಕಾರಿಗಳ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
- ಮಾನವೀಯತೆಯ ನಡವಳಿಕೆ ಅತ್ಯಗತ್ಯ: ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಜನರೊಂದಿಗೆ ಸೌಜನ್ಯ ಹಾಗೂ ಮಾನವೀಯತೆಯಿಂದ ನಡೆದುಕೊಳ್ಳಬೇಕು. ಜನರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ಹೆಬ್ಬಾರ್ ಕಟುವಾಗಿ ಹೇಳಿದರು.
- ಸಾರ್ವಜನಿಕರು ಮತ್ತು ಇಲಾಖೆಯ ನಡುವೆ ಭಯದ ವಾತಾವರಣ ಇರಬಾರದು. ಬದಲಿಗೆ ಪರಸ್ಪರ ಗೌರವ ಮತ್ತು ಪರಸ್ಪರ ನಂಬಿಕೆಯ ವಾತಾವರಣ ಸೃಷ್ಟಿಯಾಗಬೇಕು ಎಂದು ಅವರು ಒತ್ತಿಹೇಳಿದರು.
- ಅರಣ್ಯ ಸಂರಕ್ಷಣೆ ಮಾಡುವುದು ಎಷ್ಟು ಮುಖ್ಯವೋ, ಅದೇ ಕಾಡ ನಂಬಿ ಬದುಕುವ ಜನರ ಹಕ್ಕುಗಳು ಮತ್ತು ಗೌರವವೂ ಅಷ್ಟೇ ಮುಖ್ಯ. ಅಧಿಕಾರಿಗಳು ಕಾನೂನಿನ ವ್ಯಾಪ್ತಿಯಲ್ಲೇ ನಿಂತು, ಜನರ ಸಂಕಷ್ಟಗಳಿಗೆ ಸಹಾನುಭೂತಿಯಿಂದ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.














Leave a Reply