ಯಲ್ಲಾಪುರ ಜನರೇ ಗಮನಿಸಿ:  ಇಡೀ ದಿನ ಕರೆಂಟ್ ಇರಲ್ಲ,ಯಾವಾಗ ಇಲ್ಲಿದೆ ಪೂರ್ಣ ಮಾಹಿತಿ!

ಹಂಚಿಕೊಳ್ಳಿ

ಯಲ್ಲಾಪುರ: ಇಲ್ಲಿನ ಹೆಸ್ಕಾಂ ಉಪ-ವಿಭಾಗದ 33/11 ಕೆ.ವಿ. ವಿದ್ಯುತ್ ಉಪ-ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ  (ಆಗಸ್ಟ್ 5, ಬುಧವಾರ) ಪಟ್ಟಣದಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಪ್ರಕಟಿಸಿದೆ.

ಉಪ-ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕೆಲಸಗಳು ನಡೆಯಲಿವೆ. ಈ ಕಾರಣದಿಂದಾಗಿ 11 ಕೆ.ವಿ ಯಲ್ಲಾಪುರ (ಪಟ್ಟಣ) ಭಾಗದಲ್ಲಿ ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ಸಾರ್ವಜನಿಕರು ಹಾಗೂ ಗ್ರಾಹಕರು ಈ ಕಡಿತವನ್ನು ಗಮನಿಸಿ ಸಹಕರಿಸಬೇಕಾಗಿ ಯಲ್ಲಾಪುರ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್) ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *