ಶಾಲಾ ಮಕ್ಕಳ ಅಪಹರಣ ಯತ್ನದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಬಿಜೆಪಿ ತಾಲೂಧ್ಯಕ್ಷ ಪ್ರಸಾದ ಹೆಗಡೆ ಆಗ್ರಹ….

ಹಂಚಿಕೊಳ್ಳಿ

ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿ ದಿನಾಂಕ 16-7-2026 ರಂದು ಅಪರಿಚಿತರಿಂದ ಶಾಲಾ ಮಕ್ಕಳನ್ನು ಅಪಹರಿಸಲು ಅಪರಿಚಿತರಿಂದ ಯತ್ನ ಬಗ್ಗೆ ತಾಲೂಕಿನಾಧ್ಯಂದ ಭಯದ ವಾತಾವಣ ನಿರ್ಮಾಣವಾಗಿದ್ದು ಪೊಲೀಸ್ ಇಲಾಖೆ ಉನ್ನತಮಟ್ಟದ ತನಿಖೆ ನಡೆಸಬೇಕೆಂದು  ಬಿಜೆಪಿ ಯಲ್ಲಾಪುರ ತಾಲೂಕಾಧ್ಯಕ್ಷ ಪ್ರಸಾದ ಹೆಗಡೆ ಆಗ್ರಹಿಸಿದ್ದಾರೆ. 

ಈ ಕುರಿತು ” ಹಳ್ಳಿನ್ಯೂಸ್ ” ನಲ್ಲಿ ಪ್ರಸಾರವಾದ “ಶಾಲಾಮಕ್ಕಳನ್ನು ಅಪಹರಿಸಲು ಅಪರಿಚಿತರಿಂದ ಶಂಕೆ? ಎಂಬ ಶಿರ್ಷಿಕೆಯ ಅಡಿಯಲ್ಲಿ ಶುಕ್ರವಾರ ತಡರಾತ್ರಿ ವರದಿ ಪ್ರಕಟಿಸಿತ್ತು. ಇದನ್ನು  ಗಮನಿಸಿದ ಅವರು   ಶನಿವಾರ  ಹೇಳಿಕೆ ನೀಡಿ, ಇದೊಂದು ಗಂಭೀರ ವಿಷಯವಾಗಿದ್ದು  ,ಇದರಿಂದ ತಾಲೂಕಿನಾಧ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಭಿತರಾಗಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಸತ್ಯಾ ಸತ್ಯತೆ ಹೊರಹಾಕಲಿ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *