ವಾಷಿಂಗ್ಟನ್/ಟೆಹ್ರಾನ್: ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ ಉಂಟಾಗಿದ್ದ ತೀವ್ರ ಉದ್ವಿಗ್ನತೆ ಸದ್ಯ ತಿಳಿಯಾಗಿದೆ. ಉಭಯ ರಾಷ್ಟ್ರಗಳು ಪರಸ್ಪರ ಮಿಲಿಟರಿ ದಾಳಿಗಳನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದು, ಹಾರ್ಮುಜ್ ಜಲಸಂಧಿ ವಿವಾದವನ್ನು ಬಗೆಹರಿಸಲು ನಾಳೆ (ಮಂಗಳವಾರ) ಕತಾರ್‌ನ ದೋಹಾದಲ್ಲಿ ಮಹತ್ವದ ಮಾತುಕತೆ ನಡೆಸಲಿವೆ.
ಜೂನ್ 17 ರಂದು ಮಾಡಿಕೊಳ್ಳಲಾದ 14 ಅಂಶಗಳ ತಿಳುವಳಿಕೆ ಒಪ್ಪಂದದ (MoU) ಚೌಕಟ್ಟಿನಡಿಯಲ್ಲಿ ಈ ಚರ್ಚೆ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ಮೇರೆಗೆ ಇರಾನ್ ಮೇಲೆ ಯುಎಸ್ ಸೇನೆ ದಾಳಿ ನಡೆಸಿತ್ತು, ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಬಹ್ರೇನ್ ಹಾಗೂ ಕುವೈತ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಸದ್ಯ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಲು ಎರಡೂ ದೇಶಗಳು ಸಮ್ಮತಿಸಿವೆ. ಆದರೆ, ಅಮೆರಿಕ ಮತ್ತೆ ಪ್ರಚೋದನೆ ನೀಡಿದರೆ ಶಾಂತಿ ಮಾತುಕತೆ ನಿಲ್ಲಿಸುವುದಾಗಿ ಇರಾನ್ ರೆವಲ್ಯೂಷನರಿ ಗಾರ್ಡ್ ಎಚ್ಚರಿಸಿದೆ.



Leave a Reply