ಶಿರಸಿ: ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟ ಆಡುತ್ತಿದ್ದ 7 ಜನರ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸನ್ನ ವಾಲಿ (30), ಯೋಗೇಶ ಮಾನಯ್ಯನವರ (36), ಗುರುರಾಜ ಪಾಲೇಕರ (40), ಸಂತೋಷ ಮಾನಯ್ಯನವರ (30), ಪಾಂಡುರಂಗ ಬೆಂಡ್ಲಗಟ್ಟಿ (36), ಸಂದೀಪ್ ಪಾಠಣಕರ (45) ಹಾಗೂ ಅಭಿಷೇಕ ಭೋವಿ (29) ಸಿಕ್ಕಿಬಿದ್ದಿದ್ದಾರೆ.
ಶಿರಸಿ ತಾಲೂಕಿನ ಲಂಡಕನಳ್ಳಿ ಗ್ರಾಮದ ಎಸಳೆ ಕೆರೆ ದಂಡೆಯ ಮೇಲೆ ಅ.19ರಂದು ರಾತ್ರಿ 12.10ರ ಸುಮಾರಿಗೆ ಏಳು ಮಂದಿ ಹಣ ಪಣಕ್ಕಿಟ್ಟು ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಶಿರಸಿ ಗ್ರಾಮೀಣ ಪಿ.ಎಸ್.ಐ ಸಂತೋಷಕುಮಾರ.ಎಂ ನೇತೃತ್ವದಲ್ಲಿ ದಾಳಿ ನಡೆಸಿ, ಜುಗಾರಾಟಕ್ಕೆ ಬಳಸಿದ್ದ 9 ಸಾವಿರ ರೂ. ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಚಾರ್ಜಿಂಗ್ ಬ್ಯಾಟರಿ ಹಾಗೂ ಪ್ಲಾಸ್ಟಿಕ್ ಚೀಲವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















Leave a Reply