ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಯಲ್ಲಾಪುರದಲ್ಲಿ ಗೋಸೇವೆ: ಗೋವರ್ಧನ ಶಾಲೆಯ ಗೋವುಗಳಿಗೆ ಒಂದು ದಿನದ ಮೇವು ಸಮರ್ಪಿಸಿದ ನಾಯಕರು

ಹಂಚಿಕೊಳ್ಳಿ

ಯಲ್ಲಾಪುರ: ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ, ಯಲ್ಲಾಪುರ ತಾಲೂಕಿನ ಕರಡೊಳ್ಳಿಯ ಗೋವರ್ಧನ ಶಾಲೆಗೆ ಭೇಟಿ ನೀಡಿ, ಅವರ ಹೆಸರಿನಲ್ಲಿ ಒಂದು ದಿನದ ಗೋಮಾತೆಯ ಮೇವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.

ಈ ಪುಣ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಮಂಡಳ ಅಧ್ಯಕ್ಷರಾದ ಪ್ರಸಾದ ಹೆಗಡೆ, ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಛಲವಾದಿ  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳಾದ ಉಮೇಶ್ ಭಾಗ್ವತ, ರಾಘವೇಂದ್ರ ಭಟ್ಟ, ಬಾಲು ನಾಯಕ, ಗಣೇಶ ಪಾಟಣಕರ, ರವಿ ಕೈಟ್ಕರ, ಸುಬ್ಬಣ್ಣ ಬೋಳ್ಮನೆ, ನಾಗರಾಜ ಕವಡಿಕೇರಿ,  ರಾಮಚಂದ್ರ ಚಿಕ್ಯಾನಮನೆ, ಸೋಮೇಶ್ವರ ನಾಯ್ಕ, ಭಾಸ್ಕರ‌ ಸಿದ್ದಿ, ರಘುಪತಿ ಹೆಗಡೆ, ಮಹೇಶ ದೇಸಾಯಿ, ಚಂದು ಮಡಾಕರ, ವಿಠ್ಠು ಶೆಲ್ಕೆ, ಪ್ರಕಾಶ ಶಹಾಪುರ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದು ಸೇವಾ ಕಾರ್ಯದಲ್ಲಿ ಭಾಗಿಯಾದರು.

Leave a Reply

Your email address will not be published. Required fields are marked *