ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡ ಆಕರ್ಷಾ ಹುಲೇಕಲ್

ಹಂಚಿಕೊಳ್ಳಿ

ಶಿರಸಿ: ಹಾವು ರಕ್ಷಕ ಪ್ರಶಾಂತ ಹುಲೇಕಲ್ ಅವರ ಪುತ್ರಿ ಆಕರ್ಷ ಹುಲೇಕಲ್ ಯೋಗಾಸನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ.
ಸ್ನೇಕ್ ಸ್ಟಾರ್ ಪ್ರಶಾಂತ ಹುಲೇಕಲ್ ಹಾಗೂ ಸ್ವಾತಿ ದಂಪತಿಯ ಪುತ್ರಿಯಾದ ಆಕರ್ಷ ಹುಲೇಕಲ್‌, ಕೇವಲ 11 ನಿಮಿಷಗಳಲ್ಲಿ 155 ವಿವಿಧ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಈ ವಿಶಿಷ್ಟ ಸಾಧನೆ ಮಾಡಿದ್ದಾಳೆ. ತನ್ನ ಏಕಾಗ್ರತೆ, ದೈಹಿಕ ಸಾಮರ್ಥ್ಯ ಹಾಗೂ ನಿರಂತರ ಅಭ್ಯಾಸದ ಫಲವಾಗಿ ಈ ದಾಖಲೆಯನ್ನು ನಿರ್ಮಿಸಿದ್ದಾಳೆ. ನಗರದ ಕೆಎಚ್‌ಬಿ ಕಾಲೋನಿಯ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯಾದ ಆಕರ್ಷ ಹುಲೇಕಲ್‌, ಹಾವು ಹಿಡಿಯುವ ಕಲೆಯಲ್ಲಿ ಹೆಸರುವಾಸಿಯಾಗಿರುವ ತಂದೆ ಪ್ರಶಾಂತ ಹುಲೇಕಲ್ ಅವರ ಮಾರ್ಗದರ್ಶನದಲ್ಲಿ ಪ್ರಕೃತಿ ಮತ್ತು ಜೀವಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಆಕೆ, ಇದೀಗ ಯೋಗ ಕ್ಷೇತ್ರದಲ್ಲಿಯೂ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಮಟ್ಟದ ದಾಖಲೆಯನ್ನು ನಿರ್ಮಿಸಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.
ಆಕರ್ಷ ಹುಲೇಕಲ್‌ ಸಾಧನೆಗೆ ಶಾಸಕ ಭೀಮಣ್ಣ ನಾಯ್ಕ, ಡಿಡಿಪಿಐ ಡಿ.ಆರ್. ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಮತ್ತಿತರರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *