
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಒಕ್ಕಲಿಗ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ, ಕೆಪಿಸಿಸಿ ಜಿಲ್ಲಾ ಸಂಯೋಜಕ ಭಾಸ್ಕರ ಪಟಗಾರ ಅವರಿಗೆ ಸರ್ಕಾರದಲ್ಲಿ ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾ’ದಲ್ಲಿ ಭೇಟಿಯಾಗಿ ಸನ್ಮಾನಿಸಿ, ಮನವಿ ಪತ್ರ ಸಲ್ಲಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ. ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀಮಠದ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಶಿರಸಿ ಶಾಖಾಮಠದ ಪೂಜನೀಯ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಒಕ್ಕಲಿಗ ಮುಖಂಡರು ಒಗ್ಗೂಡಿ ಈ ಮನವಿಯನ್ನು ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ ಒಕ್ಕಲು, ಗ್ರಾಮ್ ಒಕ್ಕಲು, ಕರಿ ಒಕ್ಕಲಿಗ ಮುಂತಾದ ಪಂಗಡಗಳನ್ನು ಒಳಗೊಂಡ ಬೃಹತ್ ಒಕ್ಕಲಿಗ ಸಮುದಾಯವಿದೆ. ರಾಜಕೀಯವಾಗಿ ಸೂಕ್ತ ಸ್ಥಾನಮಾನ ಸಿಗದೇ ಇರುವುದರಿಂದ ಸಮುದಾಯವು ಹಿಂದುಳಿಯಲು ಕಾರಣವಾಗಿದೆ. ಕಾಂಗ್ರೇಸ್ ಪಕ್ಷದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಸಂಘಟನಾತ್ಮಕವಾಗಿ ಶ್ರಮಿಸುತ್ತಿರುವ ಭಾಸ್ಕರ್ ಪಟಗಾರ್ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಒದಗಿಸಿದರೆ ಸಮುದಾಯಕ್ಕೆ ಸೂಕ್ತ ನ್ಯಾಯ ದೊರೆಯಲಿದೆ ಎಂದು ಪ್ರಮುಖರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರನ್ನೂ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸುವುದಾಗಿ ನಿಯೋಗದ ಪ್ರಮುಖರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬೆಳ್ಳಂಬರ ಜಿಲ್ಲಾ ಹಾಲಕ್ಕಿ ಒಕ್ಕಲಿಗ ಸಂಘದ ಅಧ್ಯಕ್ಷ ಹನುಮಂತ ಗೌಡ, ಗೋಕರ್ಣ ಕುಮಟಾ ತಾಲೂಕು ಹಾಲಕ್ಕಿ ಒಕ್ಕಲಿಗ ಸಂಘದ ಅಧ್ಯಕ್ಷ ಗೋವಿಂದ ಗೌಡ, ಕಾಗಲ್ ಗ್ರಾಮ ಒಕ್ಕಲಿಗ ಮುಖಂಡ ಜಿ.ಕೆ. ಪಟಗಾರ್, ಕಾಗಲ್ ಹನುಮಂತ ದೇವಸ್ಥಾನದ ಮುಕ್ತೇಶ್ವರ ಎಂ.ಕೆ. ಪಟಗಾರ್, ಉದ್ಯಮಿ ಗಣಪತಿ ಪಟಗಾರ್ ಹಿತ್ತಲಮಕ್ಕಿ, ಗ್ರಾಮ ಒಕ್ಕಲಿಗ ಕುಮಟಾ ಅಧ್ಯಕ್ಷ ಮಂಜುನಾಥ್ ಪಟಗಾರ್, ವಕೀಲ ವಿನಾಯಕ್ ಪಟಗಾರ್, ಸಿದ್ದಾಪುರ ಒಕ್ಕಲಿಗ ಅಧ್ಯಕ್ಷ ಮೋಹನ್ ಗೌಡ ಕಿಲವಳ್ಳಿ, ಶಿರಸಿ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಉದಯ್ ಗೌಡ, ಯಲ್ಲಾಪುರ ಒಕ್ಕಲಿಗ ಸಂಘದ ಅಧ್ಯಕ್ಷ ಶೇಖರ್ ಪಟಗಾರ್, ಮುಖಂಡರಾದ ಅಶೋಕ್ ಗೌಡ, ಕೃಷ್ಣ ಗೌಡ ದೀವಗಿ, ಕುಪ್ಪು ಗೌಡ ಹೊನ್ನಾವರ, ಅರುಣ್ ಗೌಡ ಗೋಕರ್ಣ, ಕೆ.ಪಿ. ಗೌಡ, ಉಮೇಶ್ ಗೌಡ, ಎನ್.ಡಿ. ಗೌಡ, ಮಾರುತಿ ಗೌಡ ಅಗನಾಶಿನಿ, ಬಲೇಂದ್ರ ಗೌಡ ಮೂಲಿಕೆರಿ, ಪ್ರಭು ಪಟಗಾರ್, ಎಂ.ಎನ್. ಪಟ್ಗಾರ್, ಶಿರಸಿ ಕರೆ ಒಕ್ಕಲಿಗ ಸಂಘದ ಉದ್ಯಮಿ ಚಂದ್ರಕಾಂತ್ ಗೌಡ, ಮುಖಂಡ ಶ್ರೀಧರ್ ಗೌಡ, ಹನುಮಂತ್ ಪಟಗಾರ್ ಊರ್ಕೇರಿ, ಈಶ್ವರ್ ಪಟಗಾರ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಾರು ಒಕ್ಕಲಿಗರು ಇದ್ದರು.















Leave a Reply