ಶಿರಸಿ: ತಾಲೂಕಿನ ಅಚ್ಚನಹಳ್ಳಿ ಗ್ರಾಮದಲ್ಲಿಅನುಬಂಧ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 45 ದಿನಗಳ ಹೊಲಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಮಹಿಳಾ ಮತ್ತು ಮಕ್ಕಳ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಆಯುರ್ವೇದ ವೈದ್ಯೆ ಡಾ. ಪೂರ್ಣಿಮಾ ಎಸ್. ಬಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಕುಟುಂಬದ ಆರೋಗ್ಯದಲ್ಲಿ ಮಹಿಳೆಯರ ಪಾತ್ರ, ಸುಸ್ಥಿರ ಮುಟ್ಟಿನ ನಿರ್ವಹಣೆ ಹಾಗೂ ಆನಾಪಾನಸತಿ ಧ್ಯಾನದ ಮಹತ್ವ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಆನಾಪಾನಸತಿ ಧ್ಯಾನದ ಪ್ರಾಯೋಗಿಕ ಅಭ್ಯಾಸವನ್ನು ಭಾಗವಹಿಸಿದವರಿಗೆ ಮಾಡಿಸಲಾಯಿತು.
ಅನುಬಂಧ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ತರಬೇತಿದಾರರಾದ ಪ್ರೆಸಿಲಾ ಫರ್ನಾಂಡಿಸ್, ಕೌಶಲ್ಯ ಹಾಗೂ ರೇಣುಕಾ ಮರಾಠ, ಸೌಂದರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾಗಿ ಗ್ರಾಪಂ ಮಾಜಿ ಅಧ್ಯಕ್ಷೆ ಶ್ರುತಿ ಕಾನಡೆ ಕಾರ್ಯನಿರ್ವಹಿಸಿದರು.
45 ದಿನಗಳ ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತರಬೇತಿದಾರರನ್ನು ಅಭಿನಂದಿಸಲಾಯಿತು. ಅಚ್ಚನಹಳ್ಳಿ ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ಜಾಗೃತಿ ಕಾರ್ಯಕ್ರಮದ ಸದುಪಯೋಗ ಪಡೆದರು. ತರಬೇತುದಾರರು ತಾವು ಹೊಲೆದ ಬಟ್ಟೆಗಳನ್ನು ಪ್ರದರ್ಶಿಸಿ ಖುಷಿ ಪಟ್ಟರು















Leave a Reply