ಜಿಲ್ಲೆಯ ಪ್ರತಿಷ್ಠಿತ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 10 ರಂದು!!!

ಹಂಚಿಕೊಳ್ಳಿ

ಅಂಕೋಲಾ: ತಾಲೂಕಿನ  ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ ನಿಯಮಿತದ 2025-26ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಸೆಪ್ಟೆಂಬರ್ 10, 2026ರ ಗುರುವಾರ ಮಧ್ಯಾಹ್ನ 3:00 ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಸಂಘದ ಅಧ್ಯಕ್ಷ ಸಂತೋಷ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಮಹಾಸಭೆಯಲ್ಲಿ ಕಳೆದ ಸಾಲಿನ ಆಡಳಿತ ವರದಿ, ಜಮಾ ಖರ್ಚುಗಳ ಪರಿಶೀಲನೆ ಹಾಗೂ ಮುಂದಿನ ವರ್ಷದ ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆಯಲಾಗುವುದು.

ಸಭೆಯ ಪ್ರಮುಖ ಚರ್ಚಾ ವಿಷಯಗಳು:

  • ವರ್ಷದ ಲಾಭ ವಿಭಜನೆ ಹಾಗೂ 2025-26ನೇ ಸಾಲಿನ ಸಂಘದ ಲೆಕ್ಕ ತಪಾಸಣಾ ವರದಿ ಮತ್ತು ಆಡಳಿತ ಮಂಡಳಿ ಕೊಟ್ಟಿ ಉತ್ತರಗಳನ್ನು ಪರಿಶೀಲಿಸಿ ದೃಢೀಕರಿಸುವುದು.
  • ಮುಂಬರುವ 2026-27ನೇ ಸಾಲಿಗೆ ಸಂಘವು ಹಮ್ಮಿಕೊಳ್ಳಲಿರುವ ವಿವಿಧ ಚಟುವಟಿಕೆಗಳು ಹಾಗೂ ಕ್ರಿಯಾ ಯೋಜನೆಗಳ ಅನುಮೋದನೆ.
  • ಸಹಕಾರಿ ಸಂಘಗಳ ಅಥವಾ ಬ್ಯಾಂಕುಗಳಲ್ಲಿ ಸಂಘದ ಸದಸ್ಯತ್ವದ ಕುರಿತು ಚರ್ಚೆ.
  • ಸಂಘದ ಸದಸ್ಯರ ಅಥವಾ ಮುಖ್ಯ ಕಾರ್ಯನಿರ್ವಹಕರ ಸಂಬಂಧಿಕರನ್ನು ನೇಮಕ ಮಾಡಿಕೊಂಡಿದ್ದಲ್ಲಿ ಅಂತಹ ನೌಕರರ ಪಟ್ಟಿಯ ಪರಿಶೀಲನೆ.
  • ಸದಸ್ಯರಿಗೆ ನೀಡಬಹುದಾದ ಸಾಲದ ಪರಮಾವಧಿ ಮಿತಿಯನ್ನು ನಿರ್ಧರಿಸುವುದು.

ಈ ಮಹಾಸಭೆಗೆ ಗೌರವಾನ್ವಿತ ಸದಸ್ಯರೆಲ್ಲರೂ ಸಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಸಂಘದ ಪ್ರಗತಿಗೆ ಸಹಕರಿಸಬೇಕಾಗಿ ಸಂಘದ ಅಧ್ಯಕ್ಷ ಸಂತೋಷ ಭಟ್, ಮುಖ್ಯ ಕಾರ್ಯನಿರ್ವಾಹಕ ಕಾರ್ತಿಕ್ ಶೇವ್ಕಾರ್, ಪ್ರಭಾರ ಮುಖ್ಯ ಕಾರ್ಯನಿರ್ವಹಕರಾದ ಆರ್. ಆರ್. ವೈದ್ಯ, ಹಾಗೂ ನಿರ್ಗಮಿತ ಅಧ್ಯಕ್ಷರಾದ  ಗೋಪಾಲಕೃಷ್ಣ ಆರ್. ವೈದ್ಯ ಹಾಗೂ ಆಡಳಿತ ಮಂಡಳಿ ಸದಸ್ಯರು  ಜಂಟಿ  ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *