CUET UG 2026: ಬಿಜೆಪಿ ಶಾಸಕನ ಮಗಳು ಇಡೀ ದೇಶಕ್ಕೇ ಟಾಪರ್​​!

ನವದೆಹಲಿ: ಈ ವರ್ಷದ ಸಿ ಯು ಇ ಟಿ ಯು ಜಿ (CUET UG 2026) ಫಲಿತಾಂಶಗಳು ಹೊರಬಂದಿದ್ದು, ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದಾರೆ. ಈ ಬಾರಿ ದೆಹಲಿಯ ಬಿಜೆಪಿ ಶಾಸಕರೊಬ್ಬರ ಪುತ್ರಿ ದೇಶದಲ್ಲೇ ಅಗ್ರಸ್ಥಾನ (First Place) ಪಡೆಯುವ ಮೂಲಕ ಭರ್ಜರಿ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿರುವ ಫಲಿತಾಂಶಗಳಲ್ಲಿ ದೆಹಲಿಯ ದೇವಿನಾ ಗೆಹ್ಲೋಟ್ ಅವರು ಅಖಿಲ ಭಾರತ ಮಟ್ಟದಲ್ಲಿ (All India Level) ಪ್ರಥಮ ಸ್ಥಾನ ಗಳಿಸಿದ್ದಾರೆ.

ದೇವಿನಾ ಗೆಹ್ಲೋಟ್​​ ಒಟ್ಟು 1250 ಅಂಕಗಳಲ್ಲಿ ಬರೋಬ್ಬರಿ 1232.19 ಅಂಕಗಳನ್ನು ಪಡೆದು ದೇಶದ ಟಾಪರ್ (National Topper) ಆಗಿ ಹೊರಹೊಮ್ಮಿದ್ದಾರೆ. ಇವರು ದೆಹಲಿಯ ಮಾಜಿ ಸಚಿವ ಮತ್ತು ಪ್ರಸ್ತುತ ಬಿಜೆಪಿ ಶಾಸಕ ಕೈಲಾಶ್ ಗೆಹ್ಲೋಟ್ ಅವರ ಪುತ್ರಿಯಾಗಿದ್ದಾರೆ.

ವಿಷಯವಾರು ಅದ್ಭುತ ಅಂಕಗಳ ವಿವರ:

ದೆಹಲಿಯ ವಸಂತ್ ಕುಂಜ್‌ನ ದೆಹಲಿ ಪಬ್ಲಿಕ್ ಸ್ಕೂಲ್ (DPS) ವಿದ್ಯಾರ್ಥಿನಿಯಾಗಿರುವ ದೇವಿನಾ, ಈ ಹಿಂದೆ 12ನೇ ತರಗತಿ (Class 12) ಪರೀಕ್ಷೆಯಲ್ಲೂ ಶೇ. 99.2 ಅಂಕಗಳನ್ನು ಗಳಿಸಿದ್ದರು. ಈಗ ಅವರು ದೆಹಲಿಯ ಪ್ರತಿಷ್ಠಿತ ಸೇಂಟ್ ಸ್ಟೀಫನ್ಸ್ ಕಾಲೇಜ್‌ನಲ್ಲಿ (St. Stephen’s College) ಹೆಚ್ಚಿನ ಅಧ್ಯಯನ ಮುಂದುವರಿಸುವ ಗುರಿ ಹೊಂದಿದ್ದಾರೆ. ಐದು ಪ್ರಮುಖ ವಿಷಯಗಳಲ್ಲಿ ಅವರು ಪರೀಕ್ಷೆ ಬರೆದಿದ್ದು, ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ:

  • ಇಂಗ್ಲಿಷ್‌ (English) – 241.95 (99.99%)

  • ಅರ್ಥಶಾಸ್ತ್ರ (Economics) – 249.53 (100%)

  • ರಾಜ್ಯಶಾಸ್ತ್ರ (Political Science) – 249.58 (100%)

  • ಮನೋವಿಜ್ಞಾನ (Psychology) – 250 (100%)

  • ಲಲಿತಕಲೆ (Fine Arts) – 241.11 (99.91%)

ಒಟ್ಟು 1232.19 ಅಂಕಗಳೊಂದಿಗೆ ಅವರು ದೇಶದಲ್ಲಿ ಮೊದಲ ಸ್ಥಾನ ಪಡೆದರೆ, ಸಕ್ಷಮ್ ಗೋಯಲ್ (1230.82) ಎರಡನೇ ಸ್ಥಾನ ಮತ್ತು ಉದಿತ್ ಚತುರ್ವೇದಿ (1207.21) ಮೂರನೇ ಸ್ಥಾನ ಪಡೆದಿದ್ದಾರೆ.

ದಾಖಲೆ 16 ದಿನಗಳಲ್ಲಿ ಫಲಿತಾಂಶ ಪ್ರಕಟ!

ಈ ವರ್ಷ ಸಿ ಯು ಇ ಟಿ ಯು ಜಿ ಪರೀಕ್ಷೆಗೆ 15.68 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು (Registered). ಇದರಲ್ಲಿ 11.64 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು (Appeared). ಎನ್‌ಟಿಎ (NTA) ಈ ಬಾರಿ ಪರೀಕ್ಷೆ ಮುಗಿದ ಕೇವಲ 16 ದಿನಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದ್ದು, ಇದು ಕಳೆದ ವರ್ಷಕ್ಕಿಂತ 12 ದಿನಗಳು ಮುಂಚಿತವಾಗಿ ಬಿಡುಗಡೆಯಾದ ದಾಖಲೆಯಾಗಿದೆ.

Leave a Reply

Your email address will not be published. Required fields are marked *