ಯಲ್ಲಾಪುರ: ಕೊಡಸೆಯಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ; 150ಕ್ಕೂ ಹೆಚ್ಚು ಜನರಿಗೆ ಆಸರೆ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ಕೊಡಸೆಯ ವಿದ್ಯಾ ಗಜಾನನೋತ್ಸವ ಸಭಾಭವನದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಕಣ್ಣು ತಪಾಸಣಾ ಶಿಬಿರವು ಬುಧವಾರ ಯಶಸ್ವಿಯಾಗಿ ನಡೆಯಿತು.

ಒನ್‌ ಲೈಟ್‌ ಎಸ್ಸಿಲಾರ್ ಲಕ್ಸೊಟಿಕಾ ಫೌಂಡೇಶನ್ ಹಾಗೂ ಹೊನ್ನಾವರ ಹಡಿನಬಾಳದ ಸ್ಪಂದನ ಸೇವಾ ಟ್ರಸ್ಟ್ ಮತ್ತು ಕೊಡಸೆಯ ವಿದ್ಯಾ ಗಜಾನನೋತ್ಸವ ಸಮಿತಿ, ಕಣ್ಣೀಗೇರಿಯ ನಂದನ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಹಾಗೂ ಗ್ರಾಮ ಪಂಚಾಯತ್ ಮತ್ತು ಕೊಡಸೆಯ ಊರ ನಾಗರಿಕರ ಜಂಟಿ ಸಹಯೋಗದಲ್ಲಿ ಈ ಲೋಕೋಪಕಾರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

.

ಈ ಸಂದರ್ಭದಲ್ಲಿ   ಸಾಮಾಜಿಕ ಕಾರ್ಯಕರ್ತ ವಿ. ಎಸ್. ಭಟ್ಟ ಕಲ್ಲೇಶ್ವರ ಮಾತನಾಡಿ , “ಉಚಿತವಾಗಿ ವೈದ್ಯಕೀಯ ಸೇವೆ ನೀಡುವ ಸಂಸ್ಥೆಗಳಿದ್ದರೂ, ಅದನ್ನು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ಅತ್ಯಂತ ದೊಡ್ಡದು. ಇಲ್ಲಿನ ಸಂಘಟಕರು ಆ ಕೆಲಸವನ್ನು ಶ್ಲಾಘನೀಯವಾಗಿ ಮಾಡುತ್ತಿದ್ದಾರೆ” ಎಂದು ಹಾರೈಸಿದರು.

ಸ್ಪಂದನ ಸೇವಾ ಟ್ರಸ್ಟ್‌ನ ಗಣಪತಿ ಹೆಗಡೆ ಮಾತನಾಡಿ, ಗ್ರಾಮೀಣ ಭಾಗದ ಯಾರೊಬ್ಬರೂ ಕಣ್ಣಿನ ಸಮಸ್ಯೆಯಿಂದ ಬಳಲಬಾರದು ಎನ್ನುವುದೇ ಟ್ರಸ್ಟ್‌ನ ಮುಖ್ಯ ಉದ್ದೇಶ ಎಂದರು.

ಸಾಮಾಜಿಕ ಮುಖಂಡ ರವಿ ಕೈಟ್ಕರ್ ಮಾತನಾಡಿ, ಕಣ್ಣಿನ ಚಿಕಿತ್ಸೆಗಾಗಿ ದೂರದ ಮಹಾನಗರಗಳಿಗೆ ಹೋಗಲು ಸಾಧ್ಯವಾಗದ ಈ ಭಾಗದ ಜನರಿಗೆ ಹಳ್ಳಿಯಲ್ಲಿಯೇ ತಪಾಸಣೆ ಹಮ್ಮಿಕೊಂಡಿರುವುದು ಅತ್ಯಂತ ಅನುಕೂಲಕರವಾಗಿದೆ ಎಂದು ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯ ಮೇಲೆ ಪ್ರಮುಖರಾದ ಗಣಪತಿ ಗುಮ್ಮಾನಿ, ಮಂಜುನಾಥ ಪಾಟೀಲ್ ಮುಂತಾದವರಿದ್ದರು

ಸಾರ್ವಜನಿಕರ ಕಣ್ಣುಗಳನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಿದ ಸಂತೋಷ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಕೊಡಸೆ ಹಾಗೂ ಕನ್ನಡಗಲ್ ಭಾಗದ 150ಕ್ಕೂ ಹೆಚ್ಚು ನಾಗರಿಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು.

ವೇದಿಕೆಯಲ್ಲಿ ಊರಿನ ಹಿರಿಯರಾದ  ನರಸಿಂಹ ಹೆಗಡೆ ಉಪಸ್ಥಿತರಿದ್ದರು.  ಪ್ರಶಾಂತ ಹೆಗ್ಗಾರ ಕಾರ್ಯಕ್ರಮ ನಿರ್ವಹಿಸಿದರು.  ಗಣಪತಿ ಗುಮ್ಮಾನಿ ಮತ್ತು  ಮಂಜುನಾಥ ಹೆಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ್ದರು.

Leave a Reply

Your email address will not be published. Required fields are marked *