
ಯಲ್ಲಾಪುರ: ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಗಸ್ಟ್ 22ರ ಶನಿವಾರದಂದು ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಒನ್‌ಸೈಟ್ ಎಸ್ಸಿಲಾರ್‌ಲಕ್ಸೋಟಿಕಾ ಫೌಂಡೇಶನ್ ಹಾಗೂ ಹಡಿನಬಾಳದ ಸ್ಪಂದನ ಸೇವಾ ಟ್ರಸ್ಟ್ ಹೊನ್ನಾವರ ಇವರ ಜಂಟಿ ಆಶ್ರಯದಲ್ಲಿ ಈ ‘ದೃಷ್ಟಿ’ ಎಂಬ ವಿಶೇಷ ಶಿಬಿರವು ಆಯೋಜನೆಗೊಂಡಿದ್ದು, ಇದು ಸಂಸ್ಥೆಯ 65ನೇ ಸರಣಿ ಕಾರ್ಯಕ್ರಮವಾಗಿದೆ.
ಸಮಯ ಮತ್ತು ಸ್ಥಳ:
ಮಲವಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಉಚಿತ ತಪಾಸಣೆ ಹಾಗೂ ಕನ್ನಡಕ ವಿತರಣೆ ನಡೆಯಲಿದೆ.
ಕಾರ್ಯಕ್ರಮಕ್ಕೆ ಮಲವಳ್ಳಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ರವಿ ಹುಳ್ಳೆ , ಸಾಮಾಜಿಕ ಕಾರ್ಯಕರ್ತರಾದ ದೀಪಕ ಭಟ್ಟ ಶಿಗೆಕೇರಿ, ಪೂರ್ವಿ ಕಂಪ್ಯೂಟರ್ ನ ಮಾಲೀಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಕುಮಾರ ಕೆ. ಹೆಗಡೆ ಮತ್ತು ಸಂಗಡಿಗರು ಹಾಗೂ ಯಲ್ಲಾಪುರದ ಯುನೈಟ್ ಪಿಕ್ಸ್ (Unitefix) ಸಂಸ್ಥೆಯು ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಯಲ್ಲಾಪುರ ತಾಲೂಕಿನ ಹಾಗೂ ಮಾವಿನಮನೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.














Leave a Reply