ಯಲ್ಲಾಪುರ: ಸ್ಥಳೀಯ ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘ ನಿಯಮಿತ (ಉತ್ತರ ಕನ್ನಡ) ಇದರ 3ನೇ ವರ್ಷದ ವಾರ್ಷಿಕ ಮಹಾಸಭೆಯು ಬುಧವಾರ ಎ.ಪಿ.ಎಂ.ಸಿ ಆವರಣದ ಅಡಿಕೆ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಗೌರವಾಧ್ಯಕ್ಷರಾದ ವರ್ಷಾ ವಿಜಯ ಮಿರಾಶಿ ಅವರು ನಡೆಸಿದರು. ಸಂಘದ ಅಧ್ಯಕ್ಷರಾದ ಸವಿತಾ ಮೋಹನ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಸಂಧರ್ಭದಲ್ಲಿ ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ಮುರಳಿ ಹೆಗಡೆ ಹಾಗೂ ಜಿ. ಪಂ. ಮಾಜಿ ಸದಸ್ಯರಾದ ವಿಜಯ ಮಿರಾಶಿ ಅವರು ಭಾಗವಹಿಸಿ ಸಂಸ್ಥೆಯ ಬೆಳವಣಿಗೆಗೆ ಶುಭ ಹಾರೈಸಿದರು. ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಯಲ್ಲಾಪುರದ ಸಹಾಯಕ ಆರೋಗ್ಯ ಸಂರಕ್ಷಣಾಧಿಕಾರಿ ಹಿಮಾವತಿ ಭಟ್ಟ ಮತ್ತು ಯಲ್ಲಾಪುರ ತಾಲೂಕು ಆಸ್ಪತ್ರೆಯ ಕಣ್ಣಿನ ತಜ್ಞರಾದ ಡಾ. ಸೌಮ್ಯ ದೀಪಕ ಭಟ್ಟ ಅವರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಂಘದ ಪ್ರಗತಿ ಪರಿಶೀಲನೆ, ವಾರ್ಷಿಕ ವರದಿ ವಾಚನ ಹಾಗೂ ಮುಂದಿನ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಉಪಾಧ್ಯಕ್ಷರಾದ ಗೀತಾ ಗಣೇಶ ಪಾವಸ್ಕರ, ಆಡಳಿತ ಮಂಡಳಿಯ ಸರ್ವ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಸಂಘದ ನೂರಾರು ಮಹಿಳಾ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.














Leave a Reply