ಆರ್ಥಿಕ ಶಿಸ್ತಿನ ನಡೆ, ನಿರೀಕ್ಷೆ ಮೀರಿದ ಪ್ರಗತಿ: ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಪ್ರಮೋದ ಹೆಗಡೆ ಆಶಯ”

ಹಂಚಿಕೊಳ್ಳಿ

ಯಲ್ಲಾಪುರ: ಸ್ಥಳೀಯ ಯು.ಕೆ. ಸೌಹಾರ್ದ ಸಹಕಾರಿ ಸಂಘದ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್ಲಾ ಅಗತ್ಯ ನಿಧಿಗಳನ್ನು ಕಾಯ್ದಿರಿಸಿ, ಒಟ್ಟು ೧.೧೪ ಕೋಟಿ ರೂಪಾಯಿಗಳ ಭರ್ಜರಿ ಲಾಭ ಗಳಿಸಿದೆ ಎಂದು ಅಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.
ಅವರು ಪಟ್ಟಣದ ಅಡಿಕೆ ಭವನದಲ್ಲಿ ಶುಕ್ರವಾರ ಜರುಗಿದ ಸಂಸ್ಥೆಯ ೨೫ನೇ ವಾರ್ಷಿಕ ಸರ್ವಸದಸ್ಯರ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಕಾಲು ಶತಮಾನದ ಯಶಸ್ವಿ ಪಯಣ ಮುಗಿಸಿರುವ ನಮ್ಮ ಸಂಸ್ಥೆಯು ಸಮಾನ ಮನಸ್ಕರ ಶ್ರಮ ಹಾಗೂ ಸಾರ್ವಜನಿಕರ ಅಪಾರ ಪ್ರೀತಿ, ವಿಶ್ವಾಸದಿಂದ ಈ ಮಟ್ಟದ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಪ್ರಸ್ತುತ ಸಹಕಾರಿಯು ೨೨,೪೪೮ ಶೇರುದಾರರನ್ನು ಹೊಂದಿದ್ದು, ೭.೭೦ ಕೋಟಿ ರೂಪಾಯಿ ಶೇರು ಬಂಡವಾಳ ಹೊಂದಿದೆ. ಸಂಸ್ಥೆಯು ಒಟ್ಟು ೨೨೯ ಕೋಟಿ ರೂಪಾಯಿ ದುಡಿಯುವ ಬಂಡವಾಳ ಹೊಂದಿದ್ದು, ಭದ್ರತೆಯ ದೃಷ್ಟಿಯಿಂದ ಬೇರೆ ಬೇರೆ ಬ್ಯಾಂಕುಗಳಲ್ಲಿ ೯.೯೮ ಕೋಟಿ ರೂಪಾಯಿಗಳ ನಿಧಿಯನ್ನು ಕಾಯ್ದಿರಿಸಲಾಗಿದೆ ಎಂದು ವಿವರಣೆ ನೀಡಿದರು. ೨೦೦ ಕೋಟಿ ರೂ.ಗೂ ಅಧಿಕನೀಡಲಾದ ಸಾಲ: ೧೫೦ ಕೋಟಿ ರೂ.ಪಡೆದ ಸಾಲ: ೧೧.೧೩ ಕೋಟಿ ರೂ.ವಾರ್ಷಿಕ ಒಟ್ಟು ವ್ಯವಹಾರ: ೨,೨೮೮ ಕೋಟಿ ರೂ.ಸಂಸ್ಥೆಯ ಸ್ವಂತ ಆಸ್ತಿ: ೫ ಕೋಟಿ ರೂ.ಉದ್ಯೋಗ ಹಾಗೂ ಗ್ರಾಹಕ ಸೇವೆ:ಸಂಸ್ಥೆಯು ಯಲ್ಲಾಪುರದ ಪ್ರಧಾನ ಕಚೇರಿ ಸೇರಿದಂತೆ ಸ್ವಂತ ಕಟ್ಟಡ ಹಾಗೂ ೧೧ ಶಾಖೆಗಳನ್ನು ಹೊಂದಿದೆ. ಪಿಗ್ಮಿ ಸಂಗ್ರಹಕಾರರು ಒಳಗೊಂಡಂತೆ ೮೦ಕ್ಕೂ ಹೆಚ್ಚು ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕ ಶಿಸ್ತಿನ ಚೌಕಟ್ಟಿನಲ್ಲೇ ವ್ಯವಹಾರ ನಡೆಸುತ್ತಿರುವುದರಿಂದ ಮಾರ್ಚ್ ತಿಂಗಳ ನಂತರ ಸಂಸ್ಥೆ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ವಿದೇಶಿ ಹಣ ವರ್ಗಾವಣೆ (Foreign Currency Transfer) ಹಾಗೂ ಪ್ರವಾಸಿ ಟಿಕೆಟ್ ಬುಕಿಂಗ್ ಸೇರಿದಂತೆ ಹತ್ತಾರು ಅತ್ಯಾಧುನಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತಾಲೂಕಿನಲ್ಲಿ ಈಗಾಗಲೇ ೩೫ಕ್ಕೂ ಹೆಚ್ಚು ಬ್ಯಾಂಕುಗಳು ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ವಹಿವಾಟು ನಡೆಸುತ್ತಿದ್ದು, ಇದು ಈ ಭಾಗದ ಆರ್ಥಿಕ ಸಶಕ್ತತೆಯನ್ನು ತೋರಿಸುತ್ತದೆ ಎಂದು ಹೆಗಡೆ ಹೇಳಿದರು. ಸಭೆಯ ಆರ್ಥಿಕ ಚರ್ಚೆಯಲ್ಲಿ ಸಹಕಾರಿಗಳಾದ ಡಿ. ಶಂಕರ ಭಟ್ಟ ಹಾಗೂ ಕೃಷ್ಣಮೂರ್ತಿ ಹೆಗಡೆ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಲೆಕ್ಕ ಪರಿಶೋಧಕರಾದ ಸಿ.ಎ. ಎಸ್.ಜಿ. ಹೆಗಡೆ ಶಿರಸಿ ಅವರು ಪ್ರಸ್ತುತ ಸಾಲಿನ ಹಣಕಾಸು ಸ್ಥಿತಿಗತಿಗಳ ಕುರಿತು ಮಾತನಾಡಿದರು.

ಸಲಹೆಗಾರರಾದ ಪಿ.ಜಿ.ಹೆಗಡೆ, ನಿರ್ದೇಶಕರಾದ ರಮೇಶ ಪ್ರಸಾದ, ಮಹಾಬಲೇಶ್ವರ ಹೆಗಡೆ, ನಾಗೇಂದ್ರ ಭಟ್ಟ, ಸದಾನಂದ ಭಟ್ಟ ಮಲವಳ್ಳಿ, ನಾರಾಯಣ ಗಾಂವ್ಕರ, ತಿಮ್ಮಣ್ಣ ಭಟ್ಟ, ಮೆಹಬೂಬ ಮುಲ್ಲಾ, ನಾರಾಯಣ ಉಡದಂಗಿ, ದೇಮಣ್ಣ ಕೇಸರಕರ, ಭಾಸ್ಕರ ಸಿದ್ದಿ, ರಾಜೇಶ್ವರಿ ಭಟ್ಟ, ಆಶಾ ಪಟೇಲ, ಪ್ರಶಾಂತ ಹೆಗಡೆ, ಪರಮೇಶ್ವರ ಹೆಗಡೆ, ಎನ್.ಜಿ.ಕಿರಣ ಉಪಸ್ಥಿತರಿದ್ದರು. ಉಪಾಧ್ಯಕ್ಷ ಸುಬ್ಬಯ್ಯ ಧೋಗಳೆ ಸ್ವಾಗತಿಸಿದರು. ನಿರ್ದೇಶಕ ರವಿ ಭಟ್ಟ ಬರಗದ್ದೆ ನಿರ್ವಹಿಸಿದರು.

Leave a Reply

Your email address will not be published. Required fields are marked *