ಆಪರೇಷನ್‌ ಫುಟ್‌ಪಾತ್‌ ಹೆಸರಲ್ಲಿ GBA ಅಧಿಕಾರಿಗಳ ಮಹಾ ಎಡವಟ್ಟು: ಶೆಡ್ ತೆರವು ವೇಳೆ ಕುಸಿದ ಮನೆಯ ಗೋಡೆ!

ಹಂಚಿಕೊಳ್ಳಿ

ಬೆಂಗಳೂರಿನ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಗರಭಾವಿಯಲ್ಲಿ ‘ಆಪರೇಷನ್‌ ಫುಟ್‌ಪಾತ್‌’ ಹೆಸರಿನಲ್ಲಿ ಜಿಬಿಎ (GBA) ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಾ ಎಡವಟ್ಟೊಂದನ್ನು ಮಾಡಿದ್ದಾರೆ. ರಸ್ತೆ ಬದಿಯ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಹೋದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮನೆಯೊಂದರ ಗೋಡೆ ಕುಸಿದುಬಿದ್ದಿರುವ ಘಟನೆ ನಡೆದಿದೆ.

ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ

ಫುಟ್‌ಪಾತ್ ಮೇಲೆ ನಿರ್ಮಿಸಲಾಗಿದ್ದ ಶೆಡ್ ಅನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು GBA ಅಧಿಕಾರಿಗಳು ಕೈಗೊಂಡಿದ್ದರು. ಆದರೆ, ತೆರವು ಮಾಡುವ ವೇಳೆ ಸಿಬ್ಬಂದಿ ಸಮರ್ಪಕ ಮುನ್ನೆಚ್ಚರಿಕೆ ಹಾಗೂ ಕಾಳಜಿ ವಹಿಸದ ಕಾರಣ, ಶೆಡ್‌ಗೆ ಹೊಂದಿಕೊಂಡಿದ್ದ ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದಿದೆ.

ಅಧಿಕಾರಿಗಳು ಹಾಗೂ ಸಿಬ್ಬಂದಿಯ ಈ ಬೇಜವಾಬ್ದಾರಿತನ ಹಾಗೂ ಅವಾಂತರದಿಂದಾಗಿ ಮನೆಗೆ ಹಾನಿಯಾಗಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಿ GBA ಸಿಬ್ಬಂದಿಯ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds