ಬೆಂಗಳೂರು: ನಿರಂತರ ರಾಜಕೀಯ ಚಟುವಟಿಕೆಗಳಿಂದ ತುಸು ಬಿಡುವು ಪಡೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ಅವರು ಮೂರು ದಿನಗಳ ಕಾಲ ವಿಶ್ರಾಂತಿಗಾಗಿ ಕೇರಳಕ್ಕೆ (Kerala) ಪ್ರಯಾಣ ಬೆಳೆಸಿದ್ದಾರೆ.
ರಾಜಕೀಯ ಜಂಜಾಟಗಳಿಂದ ದೂರ ಉಳಿಯಲು ಬಯಸಿರುವ ಸಿದ್ದರಾಮಯ್ಯ ಅವರು ಕೇರಳದ ಕೊಚ್ಚಿನ್ಗೆ (Cochin) ತೆರಳಿದ್ದಾರೆ. ಕೊಚ್ಚಿನ್ ಬಳಿ ಇರುವ ಸಚಿವ ಕೆ.ಜೆ. ಜಾರ್ಜ್ ಅವರ ವೈಯಕ್ತಿಕ ಫಾರ್ಮ್ ಹೌಸ್ನಲ್ಲಿ (KJ George Farmhouse) ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿರುವ ಅವರು ಅಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯಲಿದ್ದಾರೆ.

ಮಾಜಿ ಸಿಎಂ ಅವರ ಈ ವಿಶ್ರಾಂತಿ ಪ್ರವಾಸಕ್ಕೆ ಕಾಂಗ್ರೆಸ್ನ ಹಿರಿಯ ಹಾಗೂ ಆಪ್ತ ನಾಯಕರ ದಂಡೇ ಸಾಥ್ ನೀಡಿದೆ. ಸಚಿವರಾದ ಕೆ.ಜೆ. ಜಾರ್ಜ್ (KJ George), ಎಚ್.ಸಿ. ಮಹದೇವಪ್ಪ (HC Mahadevappa), ಶಾಸಕರಾದ ಕೆ. ವೆಂಕಟೇಶ್ (K Venkatesh), ಎ.ಎಸ್. ಪೊನ್ನಣ್ಣ (AS Ponnanna) ಹಾಗೂ ಹಂಪನಗೌಡ ಬಾದರ್ಲಿ (Hampanagouda Badarli) ಸೇರಿದಂತೆ ಹಲವು ಪ್ರಮುಖರು ಸಿದ್ದರಾಮಯ್ಯ ಅವರ ಜೊತೆಗಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಸಿದ್ದರಾಮಯ್ಯ ಅವರು ವಿಶ್ರಾಂತಿಯಲ್ಲಿ ಕಳೆಯಲಿದ್ದಾರೆ ಎಂದು ತಿಳಿದುಬಂದಿದೆ.




Leave a Reply